ಉತ್ತರದಲ್ಲಿ ಮೋದಿ, ದಕ್ಷಿಣದಲ್ಲಿ ಟ್ರಂಪ್, ಚೀನಾ ಲಾಕ್..!
ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ಜು.1ರಿಂದ 5 ದಿನಗಳ ಕಾಲ ಚೀನಾ ಸಮರಾಭ್ಯಾಸ ಹಮ್ಮಿಕೊಂಡಿರುವ ಹೊತ್ತಿನಲ್ಲೇ, ಅದೇ ವಲಯಕ್ಕೆ ಅಮೆರಿಕ ತನ್ನ 2 ಅತ್ಯಾಧುನಿಕ ಯುದ್ಧ ನೌಕೆಗಳನ್ನು ಕಳುಹಿಸಿ ತಾನು ಕೂಡ ಸಮರಾಭ್ಯಾಸ ಆರಂಭಿಸಿದೆ.
ನವದೆಹಲಿ (ಜು. 06): ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ಜು.1ರಿಂದ 5 ದಿನಗಳ ಕಾಲ ಚೀನಾ ಸಮರಾಭ್ಯಾಸ ಹಮ್ಮಿಕೊಂಡಿರುವ ಹೊತ್ತಿನಲ್ಲೇ, ಅದೇ ವಲಯಕ್ಕೆ ಅಮೆರಿಕ ತನ್ನ 2 ಅತ್ಯಾಧುನಿಕ ಯುದ್ಧ ನೌಕೆಗಳನ್ನು ಕಳುಹಿಸಿ ತಾನು ಕೂಡ ಸಮರಾಭ್ಯಾಸ ಆರಂಭಿಸಿದೆ. ದಕ್ಷಿಣ ಚೀನಾ ವಲಯದ ಮೇಲಿನ ಚೀನಾ ಹಕ್ಕು ಸ್ಥಾಪನೆಗೆ ಅಮೆರಿಕ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆಯಾದರೂ, ಭಾರತ- ಚೀನಾ ನಡುವಿನ ಗಡಿ ಬಿಕ್ಕಟ್ಟು ಸಮರದ ಆತಂಕ ಹುಟ್ಟುಹಾಕಿರುವಾಗಲೇ ನಡೆದಿರುವ ಈ ಬೆಳವಣಿಗೆ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.
ಮೋದಿಯನ್ನು ಟೀಕಿಸುವ ಭರದಲ್ಲಿ ಸೇನಾ ಸಾಮರ್ಥ್ಯವನ್ನು ಅವಮಾನಿಸಿದ್ರಾ ರಾಹುಲ್ ಗಾಂಧಿ?
ದಕ್ಷಿಣ ಚೀನಾ ಸಮುದ್ರದ 1500 ಕಿ.ಮೀ ಪ್ರದೇಶದ ಪೈಕಿ ಶೇ.90ರಷ್ಟುತನ್ನದೆಂದು ಚೀನಾ ವಾದಿಸಿಕೊಂಡು ಬಂದಿದೆ. ಆದರೆ ಇಂಡೋ- ಪೆಸಿಫಿಕ್ ವಲಯದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಈ ಮಾರ್ಗದ ಮೇಲಿನ ಚೀನಾದ ಹಕ್ಕುಸ್ಥಾಪನೆಯ ಯತ್ನವನ್ನು ಅಮೆರಿಕ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದೆ. ಹೀಗಾಗಿ ಈ ವಲಯಕ್ಕೆ ಆಗಾಗ್ಗೆ ತನ್ನ ಯುದ್ಧ ನೌಕೆಗಳನ್ನು ಕಳುಹಿಸುವ ಮೂಲಕ ಚೀನಾಕ್ಕೆ ಸಡ್ಡು ಹೊಡೆಯುವ ಯತ್ನ ಮಾಡುತ್ತಲೇ ಇರುತ್ತದೆ.