ಮೋದಿಯನ್ನು ಟೀಕಿಸುವ ಭರದಲ್ಲಿ ಸೇನಾ ಸಾಮರ್ಥ್ಯವನ್ನು ಅವಮಾನಿಸಿದ್ರಾ ರಾಹುಲ್ ಗಾಂಧಿ?

ಸಮರ ಸದೃಶ ವಾತಾವರಣ ನಿರ್ಮಾಣವಾಗಿರುವ ಭಾರತ - ಚೀನಾ ನೈಜ ಗಡಿ ನಿಯಂತ್ರಣ ರೇಖೆ ಬಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಚ್ಚರಿಯ ಭೇಟಿ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. 

First Published Jul 6, 2020, 4:31 PM IST | Last Updated Jul 6, 2020, 4:32 PM IST

ನವದೆಹಲಿ (ಜು. 06): ಸಮರ ಸದೃಶ ವಾತಾವರಣ ನಿರ್ಮಾಣವಾಗಿರುವ ಭಾರತ - ಚೀನಾ ನೈಜ ಗಡಿ ನಿಯಂತ್ರಣ ರೇಖೆ ಬಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಚ್ಚರಿಯ ಭೇಟಿ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. 

ಅತಿಕ್ರಮಣ ಮನಸ್ಥಿತಿ ತೋರಿಸುತ್ತಿರುವ ಚೀನಾ ಖಡಕ್ ಎಚ್ಚರಿಕೆ ನೀಡಿರುವ ಅವರು ಅಂತಹ ಕಾಲವೆಲ್ಲಾ ಮುಗಿದು ಹೋಗಿದೆ. ಭಾರತ ಬದಲಾಗಿದೆ. ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ಇದೇ ವೇಳೆ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಯೋಧರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದಾರೆ. 

'ವಿದೇಶಿ ಮಹಿಳೆಗೆ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ'

ಇಡೀ ಜಗತ್ತು ನಮೋ ಭೇಟಿಯ ಬಗ್ಗೆ ಮಾತನಾಡುತ್ತಿದ್ರೆ ಅತ್ತ ರಾಹುಲ್ ಗಾಂಧಿ ನಮೋ ಭೇಟಿಯನ್ನೇ ಅನುಮಾನಿಸಿದ್ದಾರೆ. 'ಲಡಾಕಿಗಳು ಹೇಳುತ್ತಾರೆ: ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ. ಪಿಎಂ ಮೋದಿ ಹೇಳುತ್ತಾರೆ: ಯಾರೂ ನಮ್ಮ ಭೂಮಿಯನ್ನು ಕಬಳಿಸಿಕೊಂಡಿಲ್ಲ. ಹಾಗಾದರೆ ಇಲ್ಲಿ ಯಾರಾದರೂ ಒಬ್ಬರು ಸುಳ್ಳು ಹೇಳುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವಿಟ್ ಆಕ್ರೋಶಕ್ಕೆ ಕಾರಣವಾಗಿದೆ.