Suvarna Focus: ಟ್ರಂಪ್ ಅಂತಿಮ ಎಚ್ಚರಿಕೆ.. ಬಗ್ಗುತ್ತಾ ಇರಾನ್? ಗುಡುಗಿದ ಖಮೇನಿ.. ಅಮೆರಿಕಕ್ಕೆ 3 ಭಯಾನಕ ಎಚ್ಚರಿಕೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧನೌಕೆಯನ್ನು ಇರಾನ್ ಗಡಿಯತ್ತ ಕಳುಹಿಸುವ ಮೂಲಕ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ,  ಅಮೆರಿಕದ ಯುದ್ಧನೌಕೆಗಳನ್ನು ನಾಶಮಾಡಲು ಸಿದ್ಧವಾಗಿವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Share this Video
  • FB
  • Linkdin
  • Whatsapp

ವಾಷಿಂಗ್ಟನ್/ಟೆಹ್ರಾನ್ (ಫೆ.21): ವಿಶ್ವದ ಅತಿದೊಡ್ಡ ಯುದ್ಧನೌಕೆಯನ್ನು ಇರಾನ್ ಗಡಿಯತ್ತ ಕಳುಹಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಘರ್ಷಕ್ಕೆ ಅಫಿಶಿಯಲ್ ನಾಂದಿ ಹಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರೇಬಿಯನ್ ಸಮುದ್ರದಲ್ಲಿ ಅಮೆರಿಕ ತನ್ನ ಸೇನಾಬಲವನ್ನು ದುಪ್ಪಟ್ಟುಗೊಳಿಸಿದ್ದು, ಇರಾನ್‌ನ ಪ್ರಮುಖ ಪರಮಾಣು ಕೇಂದ್ರಗಳೇ ಶ್ವೇತಭವನದ ಮುಖ್ಯ ಗುರಿ ಎಂಬ ಚರ್ಚೆ ಜಾಗತಿಕ ಮಟ್ಟದಲ್ಲಿ ತೀವ್ರಗೊಂಡಿದೆ.

ಡೀಲ್‌ ಮಾಡಿಕೊಳ್ಳಿ ಇಲ್ಲವೇ ಅನುಭವಿಸಿ, ಇರಾನ್‌ಗೆ ಅಮೆರಿಕ ಕೊನೇ ವಾರ್ನಿಂಗ್‌; ಶನಿವಾರದಿಂದ ಯುದ್ಧ ಶುರು?

ಟ್ರಂಪ್ ಅವರ ಈ ರಣತಂತ್ರಕ್ಕೆ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಷ್ಟೇ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. "30 ನಿಮಿಷ, 3 ಎಚ್ಚರಿಕೆ" ಎಂಬ ಹೆಸರಿನಲ್ಲಿ ಭಾಷಣ ಮಾಡಿರುವ ಖಮೇನಿ, ಅಮೆರಿಕದ ಅಟ್ಟಹಾಸಕ್ಕೆ ತಕ್ಕ ಪೆಟ್ಟು ನೀಡಲು ಸಜ್ಜಾಗಿದ್ದಾರೆ. ಇರಾನ್‌ನ 'ಕ್ಯಾರಿಯರ್ ಕಿಲ್ಲರ್' ಮಿಸೈಲ್‌ಗಳು ಅಮೆರಿಕದ ಬೃಹತ್ ಯುದ್ಧನೌಕೆಗಳನ್ನು ಸಮುದ್ರದ ಪಾಲು ಮಾಡಲು ಸಿದ್ಧವಾಗಿವೆ ಎಂದು ಇರಾನ್ ಗುಡುಗಿದೆ.

Related Video