Asianet Suvarna News Asianet Suvarna News

ಅಮೆರಿಕ ಚುನಾವಣೆ: ಭಾರತೀಯರ ಕೈಯಲ್ಲಿ ದೊಡ್ಡಣ್ಣನ ಭವಿಷ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವಂತೆ ಭಾರತೀಯ ಮತದಾರನ್ನು ಸೆಳೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮೊಕ್ರೆಟ್‌ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಜೊ ಬೈಡನ್‌ ಬೆಂಬಲಿಗರ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ. 

ನವದೆಹಲಿ (ಅ. 21): ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವಂತೆ ಭಾರತೀಯ ಮತದಾರನ್ನು ಸೆಳೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮೊಕ್ರೆಟ್‌ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಜೊ ಬೈಡನ್‌ ಬೆಂಬಲಿಗರ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ. 

ಡೊಮೊಕ್ರಾಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್‌ ಚೀನಾದ ಪರ ಸೌಮ್ಯ ನಿಲುವನ್ನು ಹೊಂದಿದ್ದಾರೆ. ಬೈಡನ್‌ ಆಯ್ಕೆ ಆದರೆ, ಭಾರತಕ್ಕೆ ಒಳ್ಳೆಯದಲ್ಲ ಎಂದು ಟ್ರಂಪ್‌ ಪರ ಪ್ರಚಾರ ಕೈಗೊಂಡಿರುವ ಪುತ್ರ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಹೇಳಿಕೆ ನೀಡಿದ್ದಾರೆ. 

ಕೊರೊನಾ ಟ್ರೀಟ್‌ಮೆಂಟ್‌ಗೆ ಅಣು ಅಭಿವೃದ್ಧಿಪಡಿಸಿದ ಭಾರತ ಮೂಲದ ಅಮೆರಿಕಾ ಬಾಲೆ

ತಂದೆಯ ಪರ ಪ್ರಾಚಾರದ ನೇತೃತ್ವ ವಹಿಸಿಕೊಂಡಿರುವ ಟ್ರಂಪ್‌ ಜೂನಿಯರ್‌ ಕೂಡ ಭಾರತೀಯ ಮತದಾರರ ಸಳೆಯುವ ಯತ್ನಕ್ಕೆ ಮುಂದಾಗಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ 13 ಲಕ್ಷ ಭಾರತೀಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಭಾರತೀಯರ ಮತ ನಿರ್ಣಾಯಕ ಎನಿಸಿಕೊಂಡಿದೆ.

Video Top Stories