ಭಾರತ ಮೂಲಕ ಅಮೆರಿಕದ ಬಾಲೆ ಕೊರೋನಾ ವೈರಸ್‌ಗೆ ಚಿಕಿತ್ಸೆ ಕಂಡು ಹಿಡಿದಿದ್ದು, ಈಕೆಗೆ 18 ಲಕ್ಷ ರೂಪಾಯಿ ನೀಡಿ ಗೌರವಿಸಲಾಗಿದೆ. ಟೆಕ್ಸಾಟ್‌ನ 14 ವರ್ಷದ ಅನಿಕಾ ಚೆಬ್ರೊಲು 2020 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಸವಾಲನ್ನು ಗೆದ್ದಿದ್ದಾಳೆ.

ಈ ಬಾಲಕಿ ಅನುವೊಂದನ್ನು ಕಂಡು ಹಿಡಿದಿದ್ದು, ಈ ಅಣು ಕೊರೋನಾ ವೈರಸ್‌ನಲ್ಲಿರು ಪ್ರೊಟೀನ್‌ನನ್ನು ಕವರ್ ಮಾಡುತ್ತದೆ. ಈ ಮೂಲಕ ವೈರಸ್ ಮತ್ತಷ್ಟು ಹರಡುವುದನ್ನು ಮತ್ತು ಕೆಲಸ ಮಾಡುವುದನ್ನು ತಡೆಯುತ್ತದೆ.

ನಿವೃತ್ತಿ ಬಳಿಕವೂ ವಿದ್ಯಾದಾನ ಮಾಡುತ್ತಿರುವ ಪ್ರಿನ್ಸಿಪಾಲ್‌ಗೊಂದು ಸಲಾಂ!

SARS-CoV-2 ವೈರಸ್‌ನ ಪ್ರೊಟೀನ್ ಕವರ್ ಮಾಡುವ ಅಣುವನ್ನು ನಾನು ಅಭಿವೃದ್ಧಿಪಡಿಸಿದೆ. ಇದರಿಂದ ಕೊರೋನಾ ಪ್ರೊಟೀನ್ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಕೊರೋನಾ ಆರಂಭವಾಗುವ ಮುನ್ನ ಸಾಮಾನ್ಯ ಮಳೆಗಾಲದ ರೋಗಗಳ ವಿರುದ್ಧ ಔಷಧದ ಕುರಿತು ಅನಿಕಾ ಪ್ರಯತ್ನಿಸುತ್ತಿದ್ದಳು. ಆದರೆ ಪ್ಲಾನ್ ಬದಲಾಯಿತು. ಈಕೆ ಬಹಳಷ್ಟು ಕಂಪ್ಯೂಟರ್ ಪ್ರೋಗ್ರಾಮ್‌ ಮೂಲಕ ಇಂತಹದೊಂದು ಅಣು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದಳು.

ಕೆಲಸದವಳಿಗೆ ಹೊಸ ಮನೆ ಗಿಫ್ಟ್ ಮಾಡಿದ ದಂಪತಿ..! ಹೀಗಿತ್ತು ಆ ಭಾವುಕ ಕ್ಷಣ

ಡ್ರಗ್ಸ್ ಕಂಡು ಹಿಡಿಯಲು ಇನ್ ಸಿಲಿಕೋ ಮೆಥಡಾಲಜಿ ಬಳಸಿದ್ದಳು. ಇದನ್ನು ಲೈವ್ ಆಗಿ ಟೆಸ್ಟ್ ಮಾಡಿದ್ದು ಎಲ್ಲಿ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅನಿಕಾ ವೈದ್ಯಕೀಯ ಸಂಶೋಧಕಿ ಮತ್ತು ಪ್ರೊಫೆಸರ್ ಆಗುವ ಕನಸು ಕಂಡಿದ್ದಾಳೆ. ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಿದ್ದು ನನ್ನ ತಾತ ಎನ್ನುತ್ತಾಳೆ ಅನಿಕಾ