Russia Ukraine War: ಯುದ್ಧ ಬಿಟ್ಟು ನಾನು ಓಡಿ ಹೋಗಲ್ಲ: ಉಕ್ರೇನ್ ಅಧ್ಯಕ್ಷ ಸ್ಪಷ್ಟನೆ
ಯುದ್ಧ ಬಿಟ್ಟು ನಾನು ಓಡಿ ಹೋಗಲ್ಲ, ನಾನು ಓಡಿ ಹೋಗುವೆನೆಂದು ವದಂತಿ ಹಬ್ಬಿದೆ. ನಾನು ಕೀವ್‌ನಲ್ಲೇ ಇದ್ದೇನೆ. ಈ ಯುದ್ಧದಲ್ಲಿ ನಾನೇ ಟಾರ್ಗೆಟ್. ನನ್ನನ್ನು ಕೊಂಡು ಉಕ್ರೇನ್‌ನನ್ನು ರಾಜಕೀಯವಾಗಿ ಮುಗಿಸುವುದೇ ರಷ್ಯಾದ ಉದ್ದೇಶ ಎಂದು ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ಸಿ ಹೇಳಿದ್ದಾರೆ.

Russia Ukraine War:ಗಡಿ ಭಾಗದ ದೇಶಗಳ ಮೂಲಕ ಭಾರತೀಯರ ರಕ್ಷಣೆ
ತನ್ನ ದೇಶದ ಮೇಲೆ ಬಲಾಢ್ಯ ರಷ್ಯಾ ಯುದ್ಧ ಸಾರಿದ ಕೆಲವೇ ತಾಸುಗಳಲ್ಲಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಉಕ್ರೇನ್ ಅಂಗಲಾಚಿದೆ.
ರಷ್ಯಾ ಜತೆ ಭಾರತಕ್ಕೆ ವಿಶೇಷ ಸಂಬಂಧ ಇದೆ. ಪರಿಸ್ಥಿತಿ ನಿಯಂತ್ರಿಸಲು ಭಾರತ ಮತ್ತಷ್ಟು ಸಕ್ರಿಯ ಪಾತ್ರವನ್ನು ನಿರ್ವಹಿಸಬಹುದು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ಸಿ ಅವರ ಜತೆ ಮಾತನಾಡಬೇಕು. ಬಿಕ್ಕಟ್ಟನ್ನು ಬಗೆಹರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಇಗೋರ್ ಪೊಲೀಖಾ ಅವರು ಮನವಿ ಮಾಡಿದ್ದಾರೆ.