ಭೂಕಂಪಕ್ಕೆ ಬೆಚ್ಚಿ ಬಿದ್ದ ಟರ್ಕಿ & ಸಿರಿಯಾ: ಸ್ಮಶಾನವಾದ ಮಧ್ಯಪ್ರಾಚ್ಯ ರಾಷ್ಟ್ರಗಳು

ಮಹಾ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರಿಸಿ ಹೋಗಿದ್ದು, 7 ಸಾವಿರ ಬಲಿ ಹಾಗೂ ಲಕ್ಷಾಂತರ ಮಂದಿ ನಿರಾಶ್ರಿತರಾಗಿ ಬೀದಿಗೆ ಬಂದಿದ್ದಾರೆ.

First Published Feb 8, 2023, 10:37 AM IST | Last Updated Feb 8, 2023, 11:04 AM IST

ಸರಣಿ ಭೂಕಂಪಗಳಿಗೆ ಟರ್ಕಿ ಮತ್ತು ಸಿರಿಯಾ ದೇಶಗಳು ಬೆಚ್ಚಿ ಬಿದ್ದಿವೆ. ನಿನ್ನೆಯಿಂದ ಟರ್ಕಿಯಲ್ಲಿ ನಿರಂತರವಾಗಿ 5 ಭಾರೀ ಭೂಕಂಪ ಸಂಭವಿಸಿದೆ. ಟರ್ಕಿಯಲ್ಲಿ 5,200 ಹಾಗೂ ಸಿರಿಯಾದಲ್ಲಿ 2600ಕ್ಕೂ ಹೆಚ್ಚು ಸಾವುಗಳಾಗಿವೆ. ಟರ್ಕಿಯ ಹತ್ತು ಪ್ರಾಂತ್ಯಗಳು ಭೂಕಂಪದಿಂದ ಹಾನಿಯಾಗಿವೆ. ಟರ್ಕಿಯೊಂದರಲ್ಲೇ 3.8 ಲಕ್ಷ ಜನರು ನಿರಾಶ್ರಿತರಾಗಿದ್ದು, ಎರಡು ದಿನಗಳಿಂದ ನಿರಂತರವಾಗಿ ರಕ್ಷಣಾ ಕಾರ್ಯ ನಡೆದಿದೆ. ಸಿರಿಯಾದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ರಕ್ಷಣಾ ಕಾರ್ಯಾಚರಣೆಗೂ ಹವಾಮಾನ ವೈಪರೀತ್ಯ ಅಡ್ಡಿ ಉಂಟು ಮಾಡಿದೆ. ಇನ್ನು ಟರ್ಕಿಯು 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.