Asianet Suvarna News Asianet Suvarna News

ದುರಂತ ನಡೆದ್ರೂ ಎಚ್ಚೆತ್ತುಕೊಳ್ಳದ ಮೆಟ್ರೋ ಅಧಿಕಾರಿಗಳು: ಪಿಲ್ಲರ್‌ ಗುಣಮಟ್ಟದಲ್ಲಿ ಅನುಮಾನ

ಬೆಂಗಳೂರಿನಲ್ಲಿ ಭಾರೀ ಅವಘಡ ಸಂಭವಿಸಿದ್ರೂ, ನಮ್ಮ ಮೆಟ್ರೋ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಕ್ವಾಲಿಟಿ ಚೆಕ್‌ಗೆ ಹಿಂದೇಟು ಹಾಕುತ್ತಿದ್ದಾರೆ.
 

ಬೆಂಗಳೂರಿನಲ್ಲಿ ಮೆಟ್ರೋ ದುರಂತ ನಡೆದ್ರೂ BMRCL ಸಂಸ್ಥೆ ಬುದ್ಧಿ ಕಲಿತಿಲ್ಲ. ಸರಣಿ ಅಪಘಾತಗಳಾದ್ರೂ ಮೆಟ್ರೋ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ‌. ಟ್ರಿನಿಟಿ ಆಯ್ತು, ಹೆಣ್ಣೂರು ಕ್ರಾಸ್‌ ಆಯ್ತು ಮತ್ತೇನಾಗಬೇಕು ಎಂಬ ಪ್ರಶ್ನೆ ಎದುರಾಗಿದೆ.  ಕಾಮಗಾರಿ ಗುಣಮಟ್ಟದ ಬಗ್ಗೆ ಮತ್ತೆ ಭಾರೀ ಸಂದೇಹ ಉಂಟಾಗಿದ್ದು, ಮೆಟ್ರೋ ಪಿಲ್ಲರ್‌ ದುರಂತದ ಬಳಿಕವೂ BMRCl ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದು, ಮೆಟ್ರೋ  ಪಿಲ್ಲರ್‌ ಗುಣಮಟ್ಟದಲ್ಲಿ ಅನುಮಾನ ಮೂಡಿದೆ. ಕ್ವಾಲಿಟಿ ಚೆಕ್‌ಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.  ಸಾವಿರಾರು ಕೋಟಿ ಯೋಜನೆ ಬಗ್ಗೆ ಬೆಂಗಳೂರು ಮೆಟ್ರೋ ನೌಕರರ ಸಂಘ ಅನುಮಾನ ವ್ಯಕ್ತಪಡಿಸಿದೆ‌. ಮೊದಲ 2ನೇ ಹಂತದ ಮೆಟ್ರೋ ಪಿಲ್ಲರ್‌ ಕ್ವಾಲಿಟಿ ಚೆಕ್‌ಗೆ ಒತ್ತಾಯ ಮಾಡಲಾಗುತ್ತಿದ್ದು, IIT ಭಾರತೀಯ ವಿಜ್ಞಾನ ಸಂಸ್ಥೆಯಿಂದ ಕ್ವಾಲಿಟಿ ಚೆಕ್‌ಗೆ ಆಗ್ರಹಿಸಲಾಗಿದೆ. ಪಿಲ್ಲರ್‌ ನಿರ್ಮಾಣ ಕಾರ್ಯದಲ್ಲಿ ಕಳಪೆ ಕಾಮಗಾರಿ ಶಂಕೆ ಇದೆ.

Video Top Stories