
ರಣವೇಗದ ಬಿರುಗಾಳಿಗೆ ಆಪಾಯದಲ್ಲಿ 6 ಕೋಟಿ ಜನ, ಅಮೆರಿಕದಲ್ಲಿ ಬದುಕು ದಿಕ್ಕಾಪಾಲು
ಒಂದೆಡೆ ಬಿರುಗಾಳಿಯ ಆಘಾತ, ಇನ್ನೊಂದೆಡೆ ಕಾಳ್ಗಿಚ್ಚಿನ ಆಕ್ರೋಶ ಅಮೆರಿಕ ಜನ ಜೀವನ ಅಸ್ತವ್ಯಸ್ತ ಮಾಡಿದೆ. 24 ಗಂಟೆಯಲ್ಲಿ 40ಕ್ಕೂ ಅಧಿಕ ಸಾವು ಸಂಭವಿಸಿದೆ. 6 ಕೋಟಿ ಜನರ ಪ್ರಾಣ ಅಪಾಯದಲ್ಲಿದೆ. ಅಷ್ಟಕ್ಕೂ ಏನಿದು ಅಮೆರಿಕದ ರಣಗಾಳಿ?
ಹತ್ತಾರು ಊರುಗಳಲ್ಲಿ ಸುಂಟರಗಾಳಿಯ ರಣಾವೇಶ, ಮರಗಳು ನೆಲಸಮ, ಮನೆಗಳು ಛಿದ್ರಛಿದ್ರ, ಬದುಕು ದಿಕ್ಕಾಪಾಲು. 24 ಗಂಟೆಯಲ್ಲಿ 40ಕ್ಕೂ ಅಧಿಕ ಸಾವು, ರಣವೇಗದ ಬಿರುಗಾಳಿ ಕಳೆದ ಎರಡು ದಿನಗಳಲ್ಲಿ ಅಮೆರಿಕಾವನ್ನೇ ಬುಡಮೇಲು ಮಾಡಿದೆ. ಜನ ಯಾವುದನ್ನ ಕನಸಲ್ಲೂ ಎಣಿಸಿರ್ಲಿಲ್ವೋ, ಆ ದುರಂತ ಉದ್ಭವಿಸಿದೆ..ಅಷ್ಟೇ ಅಲ್ಲ, ತಿಂಗಳ ಹಿಂದಷ್ಟೇ ಅಮೆರಿಕಾ ನುಂಗಿ ಹಾಕೋಕೆ ಧಾವಿಸಿ ಬಂದಿದ್ದ ಜ್ವಾಲಾಸುರ, ಈಗ ಮತ್ತೆ ವಕ್ಕರಿಸ್ತಾನಾ ಅನ್ನೋ ಭೀತಿ ಹುಟ್ಟಿಕೊಂಡಿದೆ..ಹೊಸ ಅಧ್ಯಕ್ಷರ ಆಗಮನದ ಬೆನ್ನಲ್ಲೇ ಸಾಲು ಸಾಲು ದುರಂತಗಳು ಅಪ್ಪಳಿಸ್ತಾ ಇದಾವೆ. ಅಂಥಾ ದುರಂತ ಸೃಷ್ಟಿಸಬಲ್ಲ ಶಕ್ತಿ ಆ ಸುಂಟರಗಾಳಿಗೆ ಬಂದಿದ್ದು ಹೇಗೆ? ಯಾಕೆ?