
ಯುದ್ಧದಿಂದಲೇ ಜನನ, ಯುದ್ಧವೇ ಜೀವನ, ಸಮರ ಸುತ ಇಸ್ರೇಲ್: ಯುದ್ಧ ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ
ಯುದ್ಧದಿಂದಲೇ ಹುಟ್ಟಿ, ಯುದ್ಧದಲ್ಲೇ ಬೆಳೆದ ಇಸ್ರೇಲ್ ರಾಷ್ಟ್ರದ ಕಥೆ. ಸಮರಾಗ್ನಿಯಲ್ಲಿ ಬೆಂದ ಯಹೂದಿಗಳ ಸಾಹಸಗಾಥೆ ಇಲ್ಲಿದೆ.
ಯುದ್ಧದಿಂದಲೇ ಜನನ..ಯುದ್ಧವೇ ಜೀವನ.. ಸಮರ ಸುತ ಇಸ್ರೇಲ್..! ಕದನ ಕಿಚ್ಚಿಗೆ ಇಸ್ರೇಲ್ನ ಸಾವಿರಾರು ಕೋಟಿ ಭಸ್ಮವಾಗಿರೋದು ಹೇಗೆ..? ಇಸ್ರೇಲ್ ಉಗ್ರಾವತಾರ.. ಹೊಂಚು ಹಾಕಿದ್ದ ರಣಹದ್ದುಗಳೇ ನಾಶ..! ಮೈ ಮರೆತರೇ ಮುಗೀತು ಯಹೂದಿ ರಾಷ್ಟ್ರದ ಕಥೆ..! ಸಮರಾಗ್ನಿಯ ಬೆಳಕಲ್ಲೇ ಅಭಿವೃದ್ಧಿಯ ಹಾದಿ ಹಿಡಿದಿರೋ ಇಸ್ರೇಲ್..! ಇದು ಯುದ್ಧ ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ..! ಇದುವೇ ಇವತ್ತಿನ ಸುವರ್ಣ ಫೋಕಸ್, ಯುದ್ಧ ಸುತ, ವೈರಿ ಸೈತಾನ
ಯುದ್ಧದಿಂದ ಇಸ್ರೇಲ್ಗೂ ಲಾಸ್ ಆಗ್ತಿದೆ.. ಆದ್ರೆ, ತಾನು ಏನನ್ನ ಸಾಧಿಸ್ಬೇಕು ಅಂದುಕೊಂಡಿದ್ಯೋ ಆ ದಿಕ್ಕಿನಲ್ಲಿ ಇಸ್ರೇಲ್ ಮತ್ತೆರಡು ಹೆಜ್ಜೆ ಮುಂದಿಟ್ಟಿದ್ದು, ಇಬ್ಬರನ್ನ ಟಾರ್ಗೆಟ್ ಮಾಡಿ ಹೊಡೆದು ಹಾಕಲಾಗಿದೆ. ಇರಾನ್ ಒಳಗೆ ವಿಧ್ವಂಸ ಸೃಷ್ಟಿಸ್ತಾ ಇರೋ ಇಸ್ರೇಲ್, ಅಲ್ಲಿ ದೊಡ್ಡ ದೊಡ್ಡ ತಲೆಗಳನ್ನೇ ಉರುಳಿಸ್ತಾಯಿದೆ.. ಇದೀಗ ಇರಾನ್ನಲ್ಲಿ ಅಂತದ್ದೇ ಮತ್ತೆರಡು ತಲೆಗಳು ಉರುಳಿವೆ. ಈ ನಡುವೆ ಈ ಯುದ್ಧದಲ್ಲಿ ಅಮೆರಿಕಾ ಅಖಾಡಕ್ಕೆ ಇಳಿಯುತ್ತಾ..? ಇಲ್ವಾ..? ಅನ್ನೋ ಚರ್ಚೆ ಮಧ್ಯೆ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ.. ಹಾಗಿದ್ರೆ, ಈ ಕದನಕ್ಕೆ ಟ್ರಂಪ್ ಕೊಟ್ಟಿರೋ ಆ ಟ್ವಿಸ್ಟ್ ಏನು? ಇಷ್ಟು ದಿನ ಇರಾನ್ ಶರಣಾಗತಿಯಾದ್ರೆ, ಅಣ್ವಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದ್ರೆ, ನಾನು ಕದನ ವಿರಾಮ ಮಾಡಿಸ್ತೀನಿ ಅಂತಿದ್ದ ಟ್ರಂಪ್, ಇದೀಗ ಮತ್ತೆ ವರಸೆ ಬದಲಿಸಿದ್ದಾರೆ. ಹಾಗಿದ್ರೆ, ಈಗ ಟ್ರಂಪ್ ಹೇಳ್ತಿರೋದೇನು..? ಇರಾನ್ ನಾಶದ ಸೂಚನೆಯನ್ನ ಅವರು ಕೊಟ್ರಾ..? ಇದೆಲ್ಲದರ ವಿವರ ವೀಡಿಯೋದಲ್ಲಿದೆ ನೋಡಿ.