ಅಲ್ಲೇನೂ ಉಳಿದಿಲ್ಲ ಎಲ್ಲವೂ ನಾಶ: ಕಣ್ಣೀರಿಟ್ಟ ಅಪ್ಘಾನ್‌ ಸಂಸದ ನರೇಂದ್ರ ಸಿಂಗ್!

ಅಫ್ಘಾನಿಸ್ತಾನದಿಂದ ಈಗ ಹಲವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಇದರಲ್ಲಿ ಕೆವು ಸಿಖ್ಖರೂ ಇದ್ದಾರೆ. ಇದರಲ್ಲಿ ಅಪ್ಘಾನಿಸ್ತಾನ ನರೇಂದ್ರ ಸಿಂಗ್ ಕೂಡಾ ಒಬ್ಬರು. ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಅವರು ಕಣ್ನೀರಿಡುತ್ತಾ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಸೇನೆಗೆ ಧನ್ಯವಾದ ತಿಳಿಸಿದ್ದಾರೆ.

First Published Aug 22, 2021, 1:43 PM IST | Last Updated Aug 22, 2021, 1:43 PM IST

ನವದೆಹಲಿ(ಆ.22): ಅಫ್ಘಾನಿಸ್ತಾನದಿಂದ ಈಗ ಹಲವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಇದರಲ್ಲಿ ಕೆವು ಸಿಖ್ಖರೂ ಇದ್ದಾರೆ. ಇದರಲ್ಲಿ ಅಪ್ಘಾನಿಸ್ತಾನ ನರೇಂದ್ರ ಸಿಂಗ್ ಕೂಡಾ ಒಬ್ಬರು. ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಅವರು ಕಣ್ನೀರಿಡುತ್ತಾ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಸೇನೆಗೆ ಧನ್ಯವಾದ ತಿಳಿಸಿದ್ದಾರೆ.

ಹೌದು ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟ ಬಳಿಕ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಭಾರತೀಯರು ಕೂಡ ಈಗ ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ. ಅಫ್ಘಾನಿ ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತ ಹಿಂದುಗಳೂ ಅಲ್ಲಿಂದ ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಅಫ್ಘಾನ್ ಸಂಸದರಾದ ಅನಾರ್ಕಲಿ ಹೊನ್ರಾಯರ್, ನರೇಂದ್ರ ಸಿಂಗ್ ಖಾಲ್ಸಾ ತಮ್ಮ ಕುಟುಂಬದೊಂದಿಗೆ ದೇಶವನ್ನು ತೊರೆದಿದ್ದಾರೆ. ಇಬ್ಬರೂ ತಮ್ಮ ಕುಟುಂಬದೊಂದಿಗೆ ಕಾಬೂಲ್ ವಿಮಾನ ನಿಲ್ದಾಣದಕ್ಕೆ ತಲುಪಿದ್ದು, ಭಾರತಕ್ಕೆ ಕರೆತರಲಾಗುತ್ತಿದೆ. ಸಂಸದ ನರೇಂದ್ರ ಸಿಂಗ್ ಖಾಲ್ಸಾ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

Video Top Stories