ರಣಭಯಂಕರ ಚಿಡೋ ಸೈಕ್ಲೋನ್‌ಗೆ ತತ್ತರಿಸಿದ ಫ್ರಾನ್ಸ್: ಚಿಡೋ ಅಬ್ಬರ.. ಬೀದಿಗೆ ಬಂದ ಕರಾವಳಿ ತೀರದ ವಾಸಿಗಳು
ಚಿಡೊ ಅಟ್ಟಹಾಸಕ್ಕೆ ಸ್ಮಶಾನವಾಯ್ತು ಪ್ರಣಯ ನಗರಿ..! 90 ವರ್ಷಗಳಲ್ಲಿ ಕಾಣದ ವಿನಾಶ.. ಹಳ್ಳಿ ಹಳ್ಳಿಗಳೇ ರ್ವನಾಶ..! ಹಿಂದೂ ಮಹಾಸಾಗರದಿಂದ ಎದ್ದು ಬಂದ ಭೂತ..! ಜಲಾಕ್ರೋಶ ಸೃಷ್ಠಿಸಿದ್ದೆಂಥಾ ಅನಾಹುತ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಜಲಾಕ್ರೋಶ ಸರ್ವನಾಶ.
ಚಿಡೊ ಅಟ್ಟಹಾಸಕ್ಕೆ ಸ್ಮಶಾನವಾಯ್ತು ಪ್ರಣಯ ನಗರಿ..! 90 ವರ್ಷಗಳಲ್ಲಿ ಕಾಣದ ವಿನಾಶ.. ಹಳ್ಳಿ ಹಳ್ಳಿಗಳೇ ರ್ವನಾಶ..! ಹಿಂದೂ ಮಹಾಸಾಗರದಿಂದ ಎದ್ದು ಬಂದ ಭೂತ..! ಜಲಾಕ್ರೋಶ ಸೃಷ್ಠಿಸಿದ್ದೆಂಥಾ ಅನಾಹುತ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಜಲಾಕ್ರೋಶ ಸರ್ವನಾಶ. ಕಳೆದ ಮೂರ್ನಾಲ್ಕು ದಿನಗಳಿಂದ ಚಿಡೋ ಎಂಬ ಚಂಡಮಾರುತ ಫ್ರಾನ್ಸ್ ದೇಶವನ್ನು ನಡುಗಿಸುತ್ತಿದೆ. ಕಳೆದ 90 ವರ್ಷಗಳಲ್ಲಿ ಫ್ರಾನ್ಸ್ ಕಾಣದೇ ಇರೋ ಅತ್ಯಂತ ಭಯಾನಕ ಚಂಡಮಾರುತವಿದು. ಈ ಭಯಾನಕ ಚಂಡಮಾರುತದಿಂದ ಫ್ರಾನ್ಸ್ ಎದುರಿಸಿದ ತೊಂದರೆಗಳೇನು? ಹಾನಿಗೊಳಗಾದ ಪ್ರದೇಶಗಳು ಯಾವು? ಇಲ್ಲಿಯವರೆಗೂ ಆದ ಸಾವು-ನೋವುಗಳೆಷ್ಟು.
ಈ ಚಿಡೋ ಚಂಡಮಾರುತ ಫ್ರಾನ್ಸ್ನ ಮೆಯೆಟ್ಟ ದ್ವೀಪವನ್ನು ಹೆಚ್ಚು ಕಮ್ಮಿ ಸಂಪೂರ್ಣ ನಾಶ ಮಾಡಿದೆ. ಅಲ್ಲಿನ ನಿವಾಸಿಗಳು ಬದುಕು ಸಹಜ ಸ್ಥಿತಿಗೆ ಬರಲು ಕನಿಷ್ಠ 6 ತಿಂಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಫ್ರಾನ್ಸ್ ಕರಾವಳಿ ತೀರ ತತ್ತರಿಸಿದೆ. ಕೆಲವೆಡೆ ಮನೆಗಳು ಛಿತ್ರವಾಗಿ ಜನರ ಬದುಕು ಬೀದಿಗೆ ಬಂದಿದೆ. ಮೀನುಗಾರರ ಪಾಡನ್ನಂತೂ ಕೇಳಲೇಬೇಡಿ. ಹಾಗೆನೇ ಚಿಡೋ ಸಂಕಷ್ಟ ಸುಳಿಯಲ್ಲಿ ಸಿಲುಕಿದವರಿಗಾಗಿ ಹುಡುಕಾಟ ಇನ್ನೂ ನಡೆದಿದೆ. ಚಿಡೋ ಚಂಡಮಾರುತ ಸುಳಿಯಲ್ಲಿ ಸಿಲುಕು ನಲುಗುತ್ತಿರುವ ಫ್ರಾನ್ಸ್ ದೇಶಕ್ಕೆ ಜಗತ್ತಿನ ಪ್ರಮುಖ ನಾಯಕರು ಸಂತಾಪ ಸೂಚಿಸಿದ್ದಾರೆ. ಫ್ರಾನ್ಸ್ ದೇಶದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
ಹಾಗೆನೇ ನಮ್ಮಿಂದಾದ ಸಹಾಯ ಮಾಡಲು ನಾವು ಸಿದ್ಧರಿದ್ದೇವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚಿಡೋ ಚಂಡಮಾರುತ ಫ್ರಾನ್ಸ್ ದೇಶಕ್ಕೆ ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡಿದೆ. ಜಗತ್ತಿನ ಪ್ರಮುಖ ನಾಯಕರು ಫ್ರಾನ್ಸ್ಗೆ ಬೆಂಬಲ ಸೂಚಿಸಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆಂದು ಧೈರ್ಯ ತುಂಬಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಸಂತಾಪ ಸೂಚಿಸಿದ್ದಾರೆ. ಈ ಚಿಡೋ ಚಂಡಮಾರುತ ಫ್ರಾನ್ಸ್ ದೇಶಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಫ್ರಾನ್ಸ್ ಇಷ್ಟೊಂದು ಭಯಾನಕ ಚಂಡಮಾರುತವನ್ನು ಕಳೆದ 90 ವರ್ಷಗಳಲ್ಲಿ ಕಂಡಿರಲಿಲ್ಲ. ಚಿಡೋ ಅಬ್ಬರ ಕಡಿಮೆಯಾಗಲು ಇನ್ನು ಎರಡು ದಿನಗಳು ಬೇಕೆಂದು ಫ್ರಾನ್ಸ್ ಹವಾಮಾನ ಇಲಾಖೆ ತಿಳಿಸಿದೆ. ಅಷ್ಟರಲ್ಲಿ ಇನ್ನು ಅದೆಷ್ಟು ಪ್ರಮಾಣದ ಹಾನಿಯಾಗುತ್ತೋ ಗೊತ್ತಿಲ್ಲ.