
Suvarna Focus: ಇಸ್ರೇಲ್ ಹೆಗಲಿಗೆ ಬಂತು ಅಮೆರಿಕಾದ ಮಹಾಬಲ!
ಕೇರಳದ ಅರ್ಧದಷ್ಟು ವಿಸ್ತೀರ್ಣ ಹೊಂದಿರುವ ಇಸ್ರೇಲ್, ತನ್ನ ಅಸ್ತಿತ್ವವನ್ನೇ ಪ್ರಶ್ನಿಸುವ ಯುದ್ಧಕ್ಕೆ ಸಜ್ಜಾಗಿದೆ. ಈ ಯುದ್ಧವು ಇಸ್ರೇಲ್‌ನ ಭವಿಷ್ಯವನ್ನು ಮಾತ್ರವಲ್ಲ, ಜಗತ್ತಿನ ಭವಿಷ್ಯವನ್ನೂ ನಿರ್ಧರಿಸಬಹುದು. ಇಸ್ರೇಲ್ ಏಕೆ ಈ ಯುದ್ಧಕ್ಕೆ ಸಿದ್ಧವಾಗಿದೆ?
ಬೆಂಗಳೂರು (ಜೂ.18): ಸರಿಯಾಗಿ ನೋಡಿದರೆ, ಕೇರಳದ ಅರ್ಧದಷ್ಟಿರೋ ಪುಟ್ಟ ದೇಶ ಅದು-ಇಸ್ರೇಲ್. ಆದರೆ, ಹತ್ತಾರು ವರ್ಷಗಳಿಂದ ವೈರಿ ಪಾಳಯವನ್ನ ಮಣ್ಣಲ್ಲಿ ಮಣ್ಣು ಮಾಡುತ್ತಲೇ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದೆ.
ಈಗ ಆ ಇಸ್ರೇಲ್ ದೊಡ್ಡದೊಂದು ಯುದ್ಧಕ್ಕೆ ಸನ್ನದ್ಧವಾಗ್ಬೇಕಿದೆ. ಅದು ಇಸ್ರೇಲಿನ ಭವಿಷ್ಯವನ್ನಷ್ಟೇ ಡಿಸೈಡ್ ಮಾಡಲ್ಲ. ಇಸ್ರೇಲಿನ ಅಸ್ತಿತ್ವವನ್ನೇ ನಿರ್ಧಾರ ಮಾಡುವ ಯುದ್ಧ. ಹಾಗಾಗಿನೇ, ಇಸ್ರೇಲ್ ಈ ಹಿಂದಿನ ಎಲ್ಲಾ ಯುದ್ದಕ್ಕಿಂತಲೂ ಅತ್ಯಂತ ಗಂಭೀರವಾಗಿ ಈ ಯುದ್ಧನಾ ಎದುರಿಸುತ್ತಿದೆ. ಅದರ ಪರಿಣಾಮ ಏನಾಗಿದೆ? ಅಸಲಿಗೆ ಈ ಭೀತಿ ಗೊತ್ತಿದ್ದೂ ಕೂಡ ಯುದ್ಧಕ್ಕೆ ಸಿದ್ಧವಾಗಿದ್ದೇಕೆ ಇಸ್ರೇಲ್?
ಇರಾನ್ ಶರಣಾಗುವುದಿಲ್ಲ, ಅಮೆರಿಕ ಪರಿಣಾಮಗಳನ್ನು ಅನುಭವಿಸುತ್ತೆ: ಟ್ರಂಪ್‌ಗೆ ಸುಪ್ರೀಂ ನಾಯಕ ಖಮೇನಿ ಬೆದರಿಕೆ!
ಇಸ್ರೇಲ್ ಇರಾನ್ ನಡುವೆ ಯುದ್ಧ ನಡೆಯಬಾರದು ಅನ್ನೋದೇ, ಅದೆಷ್ಟೋ ದೇಶಗಳ ಪ್ರಾರ್ಥನೆ. ಯಾಕೆಂದರೆ, ಈ ಇಬ್ಬರ ನಡುವಿನ ಈ ಸಂಘರ್ಷ, ಸಮರವಾಗಿ ಬದಲಾದರೆ, ಅದು ಬರೀ ಯುದ್ಧವಾಗಿ ಉಳಿಯಲ್ಲ. ಮಹಾಯುದ್ಧವಾಗೋದು ಖಂಡಿತ. ಹಾಗೇನಾದ್ರೂ ಆದಲ್ಲಿ, ಜಗತ್ತಿನಲ್ಲಿ ಅಶಾಂತಿ, ವಿನಾಶ, ಎರಡೂ ಒಟ್ಟೊಟ್ಟಿಗೆ ಉದ್ಭವಿಸಲಿದೆ.