ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಪ್ರತಿಭಟನಾಕಾರರು; ಅಧ್ಯಕ್ಷರು ಪರಾರಿ

ತೀವ್ರ ಹಣದುಬ್ಬರ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗ ತಮ್ಮ ಈ ಸ್ಥಿತಿಗೆ ಕಾರಣವಾದ ಸರ್ಕಾರದ ವಿರುದ್ಧ ಕೆರಳಿರುವ ಜನರು ಇಂದು ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕರೆ ದಾಳಿ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕೊಲಂಬೋ(ಜು. 09): ನೆರೆರಾಜ್ಯ ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದ್ದು ಹಿಂಸಾತ್ಮಕ ಘರ್ಷಣೆಯಾಗಿದೆ. ಸಾವಿರಾರು ಸಂಖ್ಯೆಯ;ಲ್ಲಿ ಉದ್ರಿಕ್ತರು ಶ್ರೀಲಂಕಾದ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದಾರೆ. ಹೀಗಿರುವಾಗ ಶ್ರೀಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಪರಾರಿಯಾಗಿದ್ದಾರೆ. 

ಹೌದು ಭಾರೀ ಆರ್ಥಿಕ ಸಂಕಷ್ಟವೆದುರಿಸುತ್ತಿರುವ ಶ್ರೀಲಂಕಾದ ಜನತೆ ಮತ್ತೆ ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿದೆ. ಅಲ್ಲದೇ ಗೊಟಬಾಯ ರಾಜಪಕ್ಸೆ ರಾಜೀನಾಮೆಗೆ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ. ಹಣವಿಲ್ಲದೇ ಜನರು ಪರದಾಡುತ್ತಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಕೂಡಾ ಹಣವಿಲ್ಲದಂತಾಗಿದೆ. ಹೀಗಾಗಿ ಜನರು ಆಕ್ರೋಶಗೊಂಡಿದ್ದಾರೆ. 

ಇನ್ನು ರಾಷ್ಟ್ರಪತಿ ಭವನಕ್ಕೆ ಉದ್ರಿಕಗ್ತರು ದಾಳಿ ಮಾಡುತ್ತಾರೆಂಬ ವಿಚಾರ ಅರಿತಿದ್ದ ಅಧಿಕಾರಿಗಳು ಈ ಮೊದಲೇ ಅಧ್ಯಕ್ಷ ಗೊಟಬಾಯ ರಾಜಪಕ್ಸೆಯನ್ನು ಈ ಮೊದಲೇ ಸೇನಾ ನೆಲೆಗೆ ಸ್ಥಳಾಂತರಿಸಿದ್ದಾರೆ. 

Related Video