Asianet Suvarna News Asianet Suvarna News

ತೀವ್ರ ವೇಗದಲ್ಲಿ ಹರಡುತ್ತಿದೆ ರೂಪಾಂತರಿ ಕೊರೋನಾ ವೈರಸ್‌, ಲಸಿಕೆಗೂ ಬಗ್ಗೋದು ಡೌಟ್!

ಬ್ರಿಟನ್‌ನಲ್ಲಿ ಇತ್ತೀಚೆಗೆ ಪತ್ತೆಯಾಗಿ ವಿಶ್ವದ ಹಲವು ದೇಶಗಳಿಗೆ ಹೈಸ್ಪೀಡ್‌ ವೈರಸ್‌ ಹಬ್ಬಿದ ಬೆನ್ನಲ್ಲೇ, ದಕ್ಷಿಣ ಆಫ್ರಿಕಾದಲ್ಲಿ ಕೆಲ ವಾರಗಳ ಹಿಂದೆ ಪತ್ತೆಯಾಗಿ ತೀವ್ರ ವೇಗದಲ್ಲಿ ಹರಡುತ್ತಿರುವ ರೂಪಾಂತರಿ ಕೊರೋನಾ ವೈರಸ್‌ವೊಂದು  ಪತ್ತೆಯಾಗಿದೆ. 

ಬೆಂಗಳೂರು (ಜ. 06): ಬ್ರಿಟನ್‌ನಲ್ಲಿ ಇತ್ತೀಚೆಗೆ ಪತ್ತೆಯಾಗಿ ವಿಶ್ವದ ಹಲವು ದೇಶಗಳಿಗೆ ಹೈಸ್ಪೀಡ್‌ ವೈರಸ್‌ ಹಬ್ಬಿದ ಬೆನ್ನಲ್ಲೇ, ದಕ್ಷಿಣ ಆಫ್ರಿಕಾದಲ್ಲಿ ಕೆಲ ವಾರಗಳ ಹಿಂದೆ ಪತ್ತೆಯಾಗಿ ತೀವ್ರ ವೇಗದಲ್ಲಿ ಹರಡುತ್ತಿರುವ ರೂಪಾಂತರಿ ಕೊರೋನಾ ವೈರಸ್‌ವೊಂದು  ಪತ್ತೆಯಾಗಿದೆ. ಈ ವಿರುದ್ಧ ಈಗಿನ ಲಸಿಕೆಗಳು ಕೆಲಸ ಮಾಡುವುದು ಅನುಮಾನ ಎಂಬ ಆತಂಕ ವ್ಯಕ್ತವಾಗಿದೆ. 

ಅಮೆರಿಕಾ ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲ, ಆರೋಗ್ಯ ಗಂಭೀರವಾಗಿದ್ದರೆ ಆಸ್ಪತ್ರೆಗೆ ಬೇಡ್ವಂತೆ!

ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವಿರುದ್ಧ ಈಗಿನ ಲಸಿಕೆಗಳು ಕೆಲಸ ಮಾಡುತ್ತವೆ ಎಂದು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ವೈರಸ್‌ ವಿರುದ್ಧ ಈ ಲಸಿಕೆಗಳು ಕೆಲಸ ಮಾಡುತ್ತವೆಯೋ ಇಲ್ಲವೋ ಎಂಬುದನ್ನು ಹೇಳಲಾಗದು ಎಂದು ಹೇಳಿದ್ದಾರೆ. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನಕ್ಕೆ ಮುಂದಾಗಿದ್ದಾರೆ.