Asianet Suvarna News Asianet Suvarna News

Omicron Variant : ಆತಂಕ ದೂರ - ಒಮಿಕ್ರೋನ್‌ ಅಂತ್ಯ?

ಜಗತ್ತಿನಲ್ಲೇ ಮೊದಲು ಒಮಿಕ್ರೋನ್‌ ಕೊರೋನಾ ರೂಪಾಂತರಿ ತಳಿ ಪತ್ತೆಯಾಗಿ ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ್ದ ದಕ್ಷಿಣ ಆಫ್ರಿಕಾದಲ್ಲಿ ಇದೀಗ ‘ಒಮಿಕ್ರೋನ್‌ ಅಲೆ’ ಹೆಚ್ಚು ಹಾನಿ ಮಾಡದೆ ತನ್ನ ಗರಿಷ್ಠ ಮಟ್ಟಮುಟ್ಟಿಇಳಿಕೆಯ ಹಾದಿಯಲ್ಲಿ ಸಾಗಿರುವ ಶುಭ ಸುದ್ದಿ ಬಂದಿದೆ.

First Published Dec 23, 2021, 11:21 AM IST | Last Updated Dec 23, 2021, 12:46 PM IST

ಜೊಹಾನ್ಸ್‌ಬರ್ಗ್‌(ಡಿ.23): ಜಗತ್ತಿನಲ್ಲೇ ಮೊದಲು ಒಮಿಕ್ರೋನ್‌ ಕೊರೋನಾ ರೂಪಾಂತರಿ ತಳಿ ಪತ್ತೆಯಾಗಿ ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ್ದ ದಕ್ಷಿಣ ಆಫ್ರಿಕಾದಲ್ಲಿ ಇದೀಗ ‘ಒಮಿಕ್ರೋನ್‌ ಅಲೆ’ ಹೆಚ್ಚು ಹಾನಿ ಮಾಡದೆ ತನ್ನ ಗರಿಷ್ಠ ಮಟ್ಟಮುಟ್ಟಿಇಳಿಕೆಯ ಹಾದಿಯಲ್ಲಿ ಸಾಗಿರುವ ಶುಭ ಸುದ್ದಿ ಬಂದಿದೆ. ಕೋವಿಡ್‌ ಲಸಿಕೆ ವಿತರಣೆಯಲ್ಲಿ ವಿಶ್ವದಲ್ಲೇ ಅತ್ಯಂತ ಕಳಪೆ ಸಾಧನೆ ಮಾಡಿರುವ ಮತ್ತು ಮೊದಲ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದ್ದ ಅಲ್ಲಿನ ಬೆಳವಣಿಗೆಯನ್ನು ಇಡೀ ವಿಶ್ವ ಭಾರೀ ಕುತೂಹಲದಿಂದ ಗಮನಿಸಿತ್ತು.

Covid 19 Variant: ಅಮೆರಿಕದಲ್ಲೂ ಒಮಿಕ್ರೋನ್‌ ತಾಂಡವ: ವಾರದಲ್ಲಿ 9 ಲಕ್ಷ ಮಂದಿಗೆ ಕೊರೋನಾ ಸೋಂಕು!

ಈ ಹಿಂದಿನ ಡೆಲ್ಟಾರೂಪಾಂತರಿ ಕಳೆದ 6 ತಿಂಗಳಿನಿಂದ ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಿತ್ತು. ಆದರೆ ಒಮಿಕ್ರೋನ್‌ ಕಳೆದ ನವೆಂಬರ್‌ನಲ್ಲಿ ಕಾಣಿಸಿಕೊಂಡು, ಕೇವಲ ಒಂದು ತಿಂಗಳಲ್ಲೇ ತನ್ನ ತೀವ್ರತೆ ಕಳೆದುಕೊಂಡಿದ್ದು, ಇದು ಖಚಿತ ಪಟ್ಟರೆ ಅದು ವಿಶ್ವದ ಇತರೆ ದೇಶಗಳಿಗೂ ಶುಭ ಸುದ್ದಿಯೇ ಸರಿ. ಹೀಗಾಗಿ ದಕ್ಷಿಣ ಆಫ್ರಿಕಾದ ಬೆಳವಣಿಗೆ ಭಾರೀ ಮಹತ್ವ ಪಡೆದಿದೆ.

Video Top Stories