Covid 19 Variant: ಅಮೆರಿಕದಲ್ಲೂ ಒಮಿಕ್ರೋನ್ ತಾಂಡವ: ವಾರದಲ್ಲಿ 9 ಲಕ್ಷ ಮಂದಿಗೆ ಕೊರೋನಾ ಸೋಂಕು!
*ವಾರದಲ್ಲಿ 9 ಲಕ್ಷ ಮಂದಿಗೆ ಕೋವಿಡ್ ಸೋಂಕು
*ಶೇ.73 ಜನರ ಸೋಂಕಿಗೆ ಒಮಿಕ್ರೋನ್ ಕಾರಣ!
*ಕೊರೋನಾದಿಂದ50 ವರ್ಷದ ವ್ಯಕ್ತಿ ಬಲಿ
ನ್ಯೂಯಾರ್ಕ್ (ಡಿ. 22): ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್‌ನಲ್ಲಿ ಭಾರೀ ಹಾವಳಿ ಸೃಷ್ಟಿಸಿರುವ ರೂಪಾಂತರಿ ಒಮಿಕ್ರೋನ್ ವೈರಸ್ (Omicron Variant) ಇದೀಗ ಅಮೆರಿಕದಲ್ಲೂ (America) ಸ್ಫೋಟಗೊಂಡಿದೆ. ಕಳೆದ ವಾರ ದೇಶಾದ್ಯಂತ ಪತ್ತೆಯಾದ ಒಟ್ಟು ಹೊಸ ಪ್ರಕರಣದಲ್ಲಿ ಶೇ.73ರಷ್ಟುಪಾಲು ಕೇವಲ ಒಮಿಕ್ರೋನ್‌ನಿಂದ ಆಗಿದ್ದು ಎಂದು ದೃಢಪಟ್ಟಿದೆ. ಈ ಮೂಲಕ ಇದುವರೆಗೂ ಅತಿ ಹೆಚ್ಚು ವ್ಯಾಪಿಸಿ ಭಾರೀ ಸಾವು, ನೋವಿಗೆ ಕಾರಣವಾಗಿದ್ದ ಡೆಲ್ಟಾರೂಪಾಂತರಿಯನ್ನು (Delta) ವೇಗದಲ್ಲಿ ಒಮಿಕ್ರೋನ್ ಹಿಂದಿಕ್ಕಿದೆ.
ಅಷ್ಟುಮಾತ್ರವಲ್ಲ, ಕೋವಿಡ್ ಲಸಿಕೆ (Covid 19 Vaccine) ಪಡೆಯದಿದ್ದ ಹಾಗೂ ಈ ಹಿಂದೆ ಕೊರೋನಾದಿಂದ ಒಮ್ಮೆ ಗುಣವಾಗಿದ್ದ 50 ವರ್ಷದ ವ್ಯಕ್ತಿಯೊಬ್ಬರು ಒಮಿಕ್ರೋನ್‌ಗೆ ಟೆಕ್ಸಾಸ್‌ನಲ್ಲಿ ಬಲಿಯಾಗಿದ್ದಾರೆ. ಇದು ದೇಶದಲ್ಲಿ ಒಮಿಕ್ರೋನ್‌ನಿಂದ ದಾಖಲಾದ ಮೊದಲ ಸಾವು. ಈ ಮಧ್ಯೆ ಡೆಲ್ಟಾಹಾವಳಿಯಿಂದಲೇ ಅಮೆರಿಕದ ಚೇತರಿಸಿಕೊಳ್ಳದೆ ಇರುವಾಗಲೇ ಒಮಿಕ್ರೋನ್ ಭಾರೀ ಪ್ರಮಾಣದಲ್ಲಿ ಆವರಿಸಿದ್ದು ದೇಶದಲ್ಲಿ ಭಾರೀ ಆತಂಕ ಮೂಡಿಸಿದೆ.
"
Covid 19 Variant: 200 ದಾಟಿದ ಒಮಿಕ್ರೋನ್: ಕೊರೋನಾ ಪಾಸಿಟಿವಿಟಿ ಶೇ.10 ದಾಟಿದರೆ ನಿರ್ಬಂಧ ಜಾರಿ!
ಅಮೆರಿಕದಲ್ಲಿ ಇದುವರೆಗೂ 5.2 ಕೋಟಿ ಜನರಿಗೆ ಸೋಂಕು ತಗುಲಿದ್ದು, 8.28 ಲಕ್ಷ ಜನರು ಸಾವನ್ನಪ್ಪಿದ್ದಾರೆ. 1 ಕೋಟಿಗೂ ಹೆಚ್ಚು ಸಕ್ರಿಯ ಸೋಂಕಿತರಿದ್ದು, ಈ ಪೈಕಿ 15000ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈಗಲೂ ಸರಾಸರಿ ನಿತ್ಯ 1 ರಿಂದ 1.40 ಲಕ್ಷ ಹೊಸ ಕೇಸು ಪತ್ತೆಯಾಗುತ್ತಿದ್ದು, 300ರಿಂದ 1000 ಜನರು ಸಾವನ್ನಪ್ಪುತ್ತಿದ್ದಾರೆ.
ಕೊರೋನಾ ಸ್ಫೋಟ:
ನಿರೀಕ್ಷೆಯಂತೆ ಅಮೆರಿಕದಲ್ಲೂ ಒಮಿಕ್ರೋನ್ ವೈರಸ್ ಸ್ಫೋಟಗೊಂಡಿದೆ. ಕಳೆದ ವಾರ ದೇಶಾದ್ಯಂತ ದಾಖಲಾದ ಒಟ್ಟು ಸುಮಾರು 9 ಲಕ್ಷ ಪ್ರಕರಣಗಳ ಪೈಕಿ 6.5 ಲಕ್ಷ ಪ್ರಕರಣಗಳು ಒಮಿಕ್ರೋನ್ ರೂಪಾಂತರಿಯಿಂದಲೇ ಆಗಿದ್ದು ಎಂದು ದೃಢಪಟ್ಟಿದೆ. ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಬಿಡುಗಡೆ ಮಾಡಿರುವ ಅಂಕಿ- ಅಂಶಗಳ ಅನ್ವಯ, ಕಳೆದ ಜೂನ್‌ನಿಂದ ಮೊದಲ ಸ್ಥಾನದಲ್ಲಿದ್ದ ಡೆಲ್ಟಾಮಾದರಿಯನ್ನು ಒಮಿಕ್ರೋನ್ ಹಿಂದಿಕ್ಕಿದೆ. ಒಂದೇ ವಾರದಲ್ಲಿ ಒಮಿಕ್ರೋನ್ ಸೋಂಕಿನ ಪಾಲಿನಲ್ಲಿ 6 ಪಟ್ಟು ಹೆಚ್ಚಳ ಕಂಡುಬಂದಿದೆ. ಕೆಲವು ರಾಜ್ಯ ಮತ್ತು ಪ್ರಮುಖ ನಗರಗಳಲ್ಲಂತೂ ಒಮಿಕ್ರೋನ್ ಪಾಲು ಶೇ.90ರ ಸಮೀಪಕ್ಕೆ ಬಂದಿದೆ.
Omicron Threat: ಧಾರವಾಡ ಜಿಲ್ಲೆಗೆ ಒಮಿಕ್ರೋನ್ ಪ್ರವೇಶ: ವೈರಸ್ ಆರ್ಭಟ ಎದುರಿಸಲು ಸಿದ್ಧತೆ
ಕೇವಲ ಒಂದು ತಿಂಗಳ ಹಿಂದಷ್ಟೇ ಪತ್ತೆಯಾಗಿ ನ.26ರಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಪಾಯಕಾರಿ ವೈರಸ್ ಎಂದು ಘೋಷಿಸಲ್ಪಟ್ಟಒಮಿಕ್ರೋನ್ ಈ ವೇಗದಲ್ಲಿ ಹಬ್ಬುತ್ತಿರುವುದು ಆತಂಕಕಾರಿಯಾದರೂ ಅಚ್ಚರಿಯಲ್ಲ ಎಂದು ಸಿಡಿಸಿ ನಿರ್ದೇಶಕ ಡಾ. ರೋಚೆಲ್ಲೆ ವಾಲೆನ್‌ಸ್ಕೀ ಹೇಳಿದ್ದಾರೆ. ಡಿ.1ರಂದು ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಕೇಸು ಪತ್ತೆಯಾಗಿತ್ತು.
5326 ಕೇಸು, 453 ಸಾವು: ದೈನಂದಿನ ಕೇಸು 19 ತಿಂಗಳ ಕನಿಷ್ಠ
ಒಂದೆಡೆ ಒಮಿಕ್ರೋನ್ ರೂಪಾಂತರಿ ಸೋಂಕು ಆತಂಕ ಸೃಷ್ಟಿಸುತ್ತಿದ್ದರೂ ದೇಶದಲ್ಲಿ ದೈನಂದಿನ ಕೇಸುಗಳು ಮತ್ತೊಮ್ಮೆ 5 ಸಾವಿರದ ಆಸುಪಾಸಿಗೆ ಇಳಿದಿವೆ. ಇದು 581 ದಿನಗಳ (19 ತಿಂಗಳ) ಕನಿಷ್ಠವಾಗಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 5,326 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 453 ಸೋಂಕಿತರು ಸಾವಿಗೀಡಾಗಿದ್ದಾರೆ.
Winter Season: ಮೈ ಕೊರೆಯುವ ಚಳಿಗೆ ಥಂಡಾ ಹೊಡೆದ ಧಾರವಾಡ ಮಂದಿ: ರಾಜ್ಯದಲ್ಲೇ ಕನಿಷ್ಠ ತಾಪಮಾನ
ಈ ನಡುವೆ, 8 ಸಾವಿರ ಮಂದಿ ಗುಣಮುಖ ಆಗುವುದರೊಂದಿಗೆ ಸಕ್ರಿಯ ಪ್ರಕರಣಗಳು 79,097ಕ್ಕೆ ಇಳಿದಿದ್ದು, ಇದು 574 ದಿನಗಳ (19 ತಿಂಗಳ) ಕನಿಷ್ಠವಾಗಿದೆ. ಇದು ಒಟ್ಟು ಪ್ರಕರಣಗಳಲ್ಲಿ ಶೇ.0.23ರಷ್ಟಿದೆ. ಕಳೆದ 54 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ. 0.53ರಷ್ಟಿದೆ. ಒಟ್ಟು 3.47 ಕೋಟಿ ಪ್ರಕರಣ ದಾಖಲಾಗಿದ್ದು, ಒಟ್ಟು 4.78 ಲಕ್ಷಕ್ಕೆ ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,170 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 138.35 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.