
Russia-Ukraine War: ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ದಾಳಿ
ರಷ್ಯಾ-ಉಕ್ರೇನ್ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ರಷ್ಯಾ ಪಡೆ ಹರಸಾಹಸ ಪಡುತ್ತಿದೆ. ರಷ್ಯಾ ಕಂಡ ಕಂಡಲ್ಲಿ ಕ್ಷಿಪಣಿ ದಾಳಿ ಮಾಡುತ್ತಿದ್ದು, ಉಕ್ರೇನ್ ನ ಆಸ್ಪತ್ರೆಗಳನ್ನು ಟಾರ್ಗೆಟ್ ಮಾಡುತ್ತಿದೆ.
ಕೀವ್(ಮಾ.11): ರಷ್ಯಾ-ಉಕ್ರೇನ್ ಯುದ್ಧ (Russia-Ukraine War) 16ನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ರಷ್ಯಾ ಪಡೆ ಹರಸಾಹಸ ಪಡುತ್ತಿದೆ. ಆದರೆ ಉಕ್ರೇನ್ (Ukraine) ಮಾತ್ರ ಇದಕ್ಕೆ ಅವಕಾಶ ಕೊಡುತ್ತಿಲ್ಲ. ರಷ್ಯಾದ ಸಾಲು ಸಾಲು ಟ್ಯಾಂಕರ್‌ಗಳನ್ನು ಉಕ್ರೇನ್ ಹಿಮ್ಮೆಟ್ಟಿಸುತ್ತಿದೆ. ಗೆರಿಲ್ಲಾ ಮಾದರಿಯಲ್ಲಿ ದಾಳಿ ಮಾಡುತ್ತಿರುವ ಉಕ್ರೇನ್ ಫಿರಂಗಿಯನ್ನು ಬಳಸುತ್ತಿದೆ. ಇದಕ್ಕೆ ತತ್ತರಿಸಿರುವ ರಷ್ಯಾ ತನ್ನ ಯೋಜನೆಯನ್ನು ಬದಲಿಸಿದೆ. ಕಂಡ ಕಂಡಲ್ಲಿ ಕ್ಷಿಪಣಿ ದಾಳಿ ಮಾಡುತ್ತಿದ್ದು, ಉಕ್ರೇನ್ ನ ಆಸ್ಪತ್ರೆಗಳನ್ನು ಟಾರ್ಗೆಟ್ ಮಾಡುತ್ತಿದೆ. ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನು (maternity and children's hospital) ಕೂಡ ರಷ್ಯಾ ಬಿಟ್ಟಿಲ್ಲ.
ಈ ಶತಮಾನದ ಭವಿಷ್ಯವನ್ನು ಭಾರತ ನಿರ್ಧರಿಸಲಿದೆ : ಉಕ್ರೇನ್ ಸಂಸದ
ರಷ್ಯಾ ದಾಳಿಯಿಂದ ಉಕ್ರೇನ್ ನ ಮಾರಿಯು ಪೋಲ್ ನಗರದಲ್ಲಿ ಬೀದಿಗಳಲ್ಲಿ ಶವಗಳ ರಾಶಿ ಸೃಷ್ಟಿಯಾಗುತ್ತಿದ್ದು, ಅವುಗಳ ಅಂತ್ಯಸಂಸ್ಕಾರ ನಡೆಸುವುದೇ ನಗರಾಡಳಿತಕ್ಕೆ ಸಮಸ್ಯೆಯಾಗಿದೆ. ಪೌರ ಕೆಲಸಗಾರರು ಶವಗಳನ್ನು ದೊಡ್ಡ ಚೀಲದೊಳಕ್ಕೆ ತುಂಬಿ ದೊಡ್ಡ ಗುಂಡಿಯೊಳಗೆ ಇಳಿಸಿ ಸಾಮೂಹಿಕವಾಗಿ ದಫನ್ ಮಾಡುತ್ತಿದ್ದಾರೆ. ಸೈನಿಕರ ಸಾವಿನಿಂದ ಸ್ಮಶಾನಗಳು ತುಂಬಿದ್ದು ಸಹಜವಾಗಿ ಸಾವನ್ನಪ್ಪುತ್ತಿರುವ ನಾಗರಿಕರ ಅಂತ್ಯಸಂಸ್ಕಾರಕ್ಕೂ ಜಾಗ ಇಲ್ಲದಂತಾಗಿದೆ.