ಭಾರತವನ್ನು ಶ್ಲಾಘಿಸಿದ ಉಕ್ರೇನ್‌ ಸಂಸದ ಪ್ರಧಾನಿ ಕರೆ ಮಾಡಿ ವಿಚಾರಿಸಿದ್ದಕ್ಕೆ ಧನ್ಯವಾದ ತಿಳಿಸಿದ ಸಂಸದ ಮಾನವೀಯ ಹೆಜ್ಜೆಗಳಿಗೆ ಸಂಸದರಿಂದ ಕೃತಜ್ಞತೆ

ಕೈವ್: ಉಕ್ರೇನ್ ವಿರುದ್ಧದ ರಷ್ಯಾದ ಸೇನಾ ಕಾರ್ಯಾಚರಣೆಯಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಭಾರತ ಕೈಗೊಂಡಿರುವ ಮಾನವೀಯ ಕ್ರಮಗಳಿಗಾಗಿ ಉಕ್ರೇನ್‌ನ ಸಂಸದ ಸ್ವಿಯಾಟೊಸ್ಲಾವ್ ಯುರಾಶ್ (Sviatoslav Yurash) ಭಾರತವನ್ನು ಶ್ಲಾಘಿಸಿದ್ದಾರೆ ಮತ್ತು ಉಕ್ರೇನ್‌ನ ಪ್ರಸ್ತುತ ಪರಿಸ್ಥಿತಿಯ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ (Volodymyr Zelenskyy) ಅವರೊಂದಿಗೆ ಮಾತನಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಭಾರತವು ಈ ಶತಮಾನದ ಭವಿಷ್ಯವನ್ನು ನಿರ್ಧರಿಸುವ ದೇಶಗಳಲ್ಲಿ ಒಂದಾಗಿದೆ. ನನಗೆ ತಿಳಿದಂತೆ ರಷ್ಯಾದ ಸಂಬಂಧದಲ್ಲಿ ಭಾರತದ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಳಜಿ ಇದೆ. ಪ್ರಧಾನಿ ಮೋದಿಯವರು ನಮ್ಮ ಅಧ್ಯಕ್ಷರಿಗೆ ಮಾಡಿದ ದೂರವಾಣಿ ಕರೆಗೆ ಧನ್ಯವಾದಗಳು. ಭಾರತವು ತೆಗೆದುಕೊಂಡ ಮಾನವೀಯ ಹೆಜ್ಜೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಸಂಸದರು ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Russia Ukraine War: ಕದನ ವಿರಾಮದಿಂದ ತಗ್ಗಿದ ಯುದ್ಧ ಅಬ್ಬರ!

ಭಾರತವು ರಷ್ಯಾದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ. ಆದಾಗ್ಯೂ, ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಆಕ್ರಮಣದ ಮಧ್ಯೆ ಭಾರತವು (India) ಆ ಸ್ಥಾನವನ್ನು ಮರುಪರಿಶೀಲಿಸಬೇಕಾಗಿದೆ ಎಂದು ಉಕ್ರೇನ್ ಸಂಸದರು ಹೇಳಿದರು. ಭಾರತ-ರಷ್ಯಾಕ್ಕೆ ಸಂಬಂಧಿಸಿದಂತೆ, ನೀವು ವ್ಯೂಹಾತ್ಮಕ ಸ್ನೇಹ ಮತ್ತು ಪಾಲುದಾರಿಕೆಯ ಒಪ್ಪಂದವನ್ನು ಹೊಂದಿದ್ದೀರಿ, ಉಕ್ರೇನ್ ಮೇಲೆ ಮಾತ್ರವಲ್ಲದೆ ಪುಟಿನ್ ಆಡಳಿತವು ಕಳೆದ 20 ವರ್ಷಗಳಿಂದ ಮಾಡುತ್ತಿರುವ ಎಲ್ಲಾ ದುಷ್ಕೃತ್ಯಗಳನ್ನು ಮರುಪರಿಶೀಲಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ರಷ್ಯಾ ಭಾರತದಿಂದ ಶಿಕ್ಷೆಗೆ ಗುರಿಯಾಗುವ ಅಗತ್ಯವಿದೆ ಎಂದು ಅವರು ಹೇಳಿದರು.

ಉಕ್ರೇನ್‌ನಲ್ಲಿ ಶೀಘ್ರದಲ್ಲೇ ಶಾಂತಿ ಮರಳುವುದನ್ನು ಸಂಸದರು ನೋಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕ್ರೆಮ್ಲಿನ್ (Kremlin)(ಕ್ರೆಮ್ಲಿನ್ ರಷ್ಯಾದ ಮಾಸ್ಕೋದಲ್ಲಿರುವ ರುರಿಕಿಡ್ಸ್ನ ರಾಜವಂಶದಿಂದ ಸ್ಥಾಪಿಸಲ್ಪಟ್ಟ ಕೋಟೆ) ಅನ್ನು ಅವಲಂಬಿಸಿದೆ. ಕ್ರೆಮ್ಲಿನ್ ಒತ್ತಡವನ್ನು ಮುಂದುವರಿಸಲು ನಿರ್ಧರಿಸಿದರೆ, ನಾವು ಹೋರಾಟವನ್ನು ಮುಂದುವರಿಸುತ್ತೇವೆ. ನಮ್ಮ ಪೂರ್ವಜರು ಕಾಪಾಡಿದಂತೆ ನಾವು ಕೂಡ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತೇವೆ. ನಾವು ಗೆದ್ದಿದ್ದನ್ನೆಲ್ಲ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

500 ಭಾರತೀಯರು ಉಕ್ರೇನ್‌ ಸೇನೆಗೆ ಸೇರ್ಪಡೆಗೆ ಸಜ್ಜು?

ಇದಕ್ಕೂ ಮೊದಲು, ಈ ಉಕ್ರೇನ್ ಸಂಸದ ಸ್ವಿಯಾಟೊಸ್ಲಾವ್ ಯುರಾಶ್ ಕೂಡ ಬಂದೂಕು ಹಿಡಿದುಕೊಂಡು ದೇಶದ ಗಡಿಯನ್ನು ಕಾವಲು ಕಾಯುತ್ತಿದ್ದರು. ಆ ಚಿತ್ರದ ಕುರಿತು ಪ್ರತಿಕ್ರಿಯಿಸಿದ ಸಂಸದರು, ಕೈವ್ ಗೆ (Kyiv) ಮುತ್ತಿಗೆ ಹಾಕಲಾಗಿದೆ ಮತ್ತು ಉಕ್ರೇನ್ ಅನ್ನು ಸಜ್ಜುಗೊಳಿಸಲು ಮತ್ತು ರಷ್ಯಾದ ಆಕ್ರಮಣದ ವಿರುದ್ಧ ರಕ್ಷಿಸಲು ಎಲ್ಲರೂ ಸೈನಿಕರಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸ್ಥಳವನ್ನು ಹುಡುಕಬೇಕಾಗಿದೆ ಎಂದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಮಧ್ಯೆ ಪಾಶ್ಚಿಮಾತ್ಯ ರಾಷ್ಟ್ರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಈ ಸಂಸದರು ಶ್ಲಾಘಿಸಿದರು.

ಉಕ್ರೇನ್(Ukraine) ತನ್ನ ಪಾಲುದಾರರಿಂದ (ಪಾಶ್ಚಿಮಾತ್ಯ ರಾಷ್ಟ್ರಗಳು) ದ್ರೋಹ ಕ್ಕೊಳಗಾಗಿದೆಯೇ ಎಂದು ಕೇಳಿದಾಗ, ಇತರ ಆಯ್ಕೆಗಳು ಇಲ್ಲದಾದಾಗ ಪಶ್ಚಿಮ ರಾಷ್ಟ್ರಗಳು ಸರಿಯಾದ ಕೆಲಸವನ್ನು ಮಾಡುತ್ತವೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ವಾಸ್ತವವೆಂದರೆ, ಆ ಸಂಸ್ಥೆಗಳು ಕಾರ್ಯರೂಪಕ್ಕಿಳಿಸಯಲು ಸಮಯ ತೆಗೆದುಕೊಳ್ಳುತ್ತಿವೆ ಎಂದರು. ಆದರೆ ನಮಗೆ ಸಮಯವಿಲ್ಲ ಹೀಗಾಗಿ ನಾವು ರಷ್ಯಾ (Russia) ವಿರುದ್ಧ ಹೋರಾಡುತ್ತಿದ್ದೇವೆ ಎಂದರು. ಪಶ್ಚಿಮಕ್ಕೆ ಸಂಬಂಧಿಸಿದಂತೆ, ನಾವು ಸಾಕಷ್ಟು ಸಹಾಯವನ್ನು ಪಡೆದಿದ್ದೇವೆ, ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಆದರೆ ಅದ್ಯಾವುದೂ ಸಾಕಾಗುವುದಿಲ್ಲ, ಯಾವುದೂ ಹೆಚ್ಚು ಅಲ್ಲ ಮತ್ತು ಎಲ್ಲರಿಗೂ ಸ್ವಾಗತ ಎಂದು ಅವರು ಹೇಳಿದರು.

ಈ ನಡುವೆ ರಷ್ಯಾ ದಾಳಿಗೆ ಪ್ರತಿದಾಳಿ ನಡೆಸಲು ರಚನೆ ಮಾಡಿರುವ ಉಕ್ರೇನ್‌ನ ಅಂತಾರಾಷ್ಟ್ರೀಯ ಸೇನೆಗೆ 500ಕ್ಕೂ ಹೆಚ್ಚು ಭಾರತೀಯರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.