Russia Ukraine war ವಿಕಿರಣ ತಡೆಯುವ ಮಾತ್ರೆಗಳಿಗೆ ಭಾರೀ ಬೇಡಿಕೆ!

ರಷ್ಯಾ-ಉಕ್ರೇನ್ ನಡುವಿನ ಯುದ್ಧ

ಇಡೀ ಯುರೋಪ್ ಗೆ ವಿಕಿರಣ ಭೀತಿಯ ಆತಂಕ

ವಿಕಿರಣ ತಡೆಯುವ ಮಾತ್ರಗಳಿಗೆ ಯುರೋಪ್ ನಲ್ಲಿ ಭಾರೀ ಬೇಡಿಕೆ

First Published Mar 22, 2022, 8:49 PM IST | Last Updated Mar 22, 2022, 8:49 PM IST

ಬೆಂಗಳೂರು (ಮಾ. 22): ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದೊಂದು ದಿನ ಅಣುಬಾಂಬ್ (Nuclear Bomb) ದಾಳಿಯಲ್ಲಿ ಮುಗಿಯಬಹುದು ಎನ್ನುವ ಅಂದಾಜಿನಲ್ಲಿರುವ ಇಡೀ ಯುರೋಪ್ (Europe ) ಈಗ ವಿಕಿರಣವನ್ನು ತಡೆಯುವ ಮಾತ್ರೆಗಳನ್ನು (Radiation Blocking Pills ) ಖರೀದಿಸುವಲ್ಲಿ ಮುಂದಾಗಿದೆ. ಅಯೋಡಿನ್ ಮಾತ್ರೆಗಳಿಗೆ ಯುರೋಪ್ ನಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಹಾಗೇನಾದರೂ ಅಣುಬಾಂಬ್ ದಾಳಿ ಆದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಾತ್ರೆಗಳ ಶೇಖರಣೆ ಮಾಡಲಾಗುತ್ತಿದೆ. 

ಮಾತ್ರೆಗಳು ದೀರ್ಘಕಾಲೀನ ಥೈರಾಯ್ಡ್ ಕ್ಯಾನ್ಸರ್ ನ ಬೆದರಿಕೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಚೆರ್ನೋಬಿಲ್ ಮಹಾದುರಂತದ ನಂತರ, ವಿಶೇಷವಾಗಿ ಶಿಶುಗಳು ಮತ್ತು ಮಕ್ಕಳಲ್ಲಿ ಈ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಅತ್ತ ರಷ್ಯಾ ಹೆಜ್ಜೆ ಹೆಜ್ಜೆಗೂ ನ್ಯೂಕ್ಲಿಯರ್ ಆತಂಕವನ್ನು ಜಗತ್ತಿಗೆ ನೀಡುತ್ತಿರುವ ಸಮಯದಲ್ಲಿ ಯುರೋಪ್ ನ ಜನತೆ ಅಯೋಡಿನ್ ಮಾತ್ರೆಗಳ ಹಿಂದೆ ಬಿದ್ದಿದೆ. 

Russia Ukraine war ಮೆದುಳಿನ ಸಮಸ್ಯೆ ಎದುರಿಸ್ತಿದ್ದಾರಾ ವ್ಲಾಡಿಮಿರ್ ಪುಟಿನ್?
ಬೆಲ್ಜಿಯಂ ದೇಶವೊಂದರಲ್ಲೇ 30 ಸಾವಿರ ಜನ ಫಾರ್ಮಸಿಗಳಿಗೆ ತೆರಳಿ ವಿಕಿರಣ ತಡೆಯುವ ಮಾತ್ರೆಗಳ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ನು ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ದಿನದಿಂದ ಫಿನ್ಲೆಂಡ್ ನಲ್ಲಿ ವಿಕಿರಣ ತಡೆಯುವ ಮಾತ್ರೆಗಳಿಗೆ 100 ಪಟ್ಟು ಅಧಿಕ ಬೇಡಿಕೆ ಕಂಡುಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. "ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಾಗಿ ಪೊಟ್ಯಾಸಿಯಮ್ ಅಯೋಡೈಡ್ ತೆಗೆದುಕೊಳ್ಳುವುದು ಹೆಚ್ಚಿನ ರಕ್ಷಣೆಯನ್ನು ನೀಡುವುದಿಲ್ಲ ಮತ್ತು ತೀವ್ರ ಅನಾರೋಗ್ಯ ಅಥವಾ ಸಾವಿಗೆ ಕಾರಣವಾಗಬಹುದು" ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಚ್ಚರಿಕೆ ನೀಡಿದೆ.

Video Top Stories