Russia Ukraine War: 8ನೇ ದಿನಕ್ಕೆ ಕಾಲಿಟ್ಟ ಯುದ್ಧ: ಖಾರ್ಕೀವ್‌ ಮೇಲೆ ಮತ್ತಷ್ಟು ಪ್ರಬಲ ದಾಳಿಗೆ ರಷ್ಯಾ ಸಜ್ಜು!

*8ನೇ ದಿನಕ್ಕೆ ಕಾಲಿಟ್ಟ ರಷ್ಯಾ ಉಕ್ರೇನ್‌  ಯುದ್ಧ
*ಉಕ್ರೇನ್‌ನ 3 ನಗರಗಳು, ಅನೇಕ ಸಣ್ಣ ಸಣ್ಣ ಪ್ರದೇಶಗಳಿಗೆ ಲಗ್ಗೆ
*ಜನವಸತಿ ಪ್ರದೇಶಗಳೂ ಗುರಿ: 2000 ಉಕ್ರೇನ್‌ ನಾಗರಿಕರ ಸಾವು
 

First Published Mar 3, 2022, 9:44 AM IST | Last Updated Mar 3, 2022, 9:48 AM IST

ಕೀವ್‌ (ಮಾ. 03): ಉಕ್ರೇನ್‌ ವಶಕ್ಕೆ ತನ್ನ ಪ್ರಯತ್ನವನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ ಸೇನೆ, ಯುದ್ಧದ 8ನೇ ದಿನವಾದ ಗುರುವಾರ ಕೂಡ ಯುದ್ಧ ಮುಂದುವರೆಸಿದೆ. ರಾಜಧಾನಿ ಕೀವ್‌ ನಗರವನ್ನು ಸುತ್ತುವರಿದು ಅದರ ಸಂಪೂರ್ಣ ವಶಕ್ಕೆ ತುದಿಗಾಲಲ್ಲಿ ನಿಂತಿದೆ. ಇನ್ನೊಂದು ಕಡೆ, ಭಾರತೀಯ ಮೂಲದವರೇ ಹೆಚ್ಚಿದ್ದ ಎರಡನೇ ಅತಿದೊಡ್ಡ ನಗರ ಖಾರ್ಕೀವ್‌ ಮೇಲೆ ಇನ್ನಿಲ್ಲದಂತೆ ಕ್ಷಿಪಣಿ ಹಾಗೂ ಬಾಂಬ್‌ಗಳ ಮಳೆಗರೆದು ಇಡೀ ನಗರವನ್ನು ತನ್ನ ವಶ ಮಾಡಿಕೊಂಡಿದೆ. 

ಇದನ್ನೂ ಓದಿ: Russia Ukraine War: ರಷ್ಯಾ ಪರ ಇದ್ದ ಚೀನಾದಿಂದ ಈಗ ಉಕ್ರೇನ್‌ ಪರ ಬ್ಯಾಟಿಂಗ್‌

ಇನ್ನು ಈವರೆಗೆ ಪೂರ್ವ ಹಾಗೂ ಉತ್ತರದಿಂದ ದಾಳಿ ನಡೆಸಿದ್ದ ರಷ್ಯಾ ಈಗ ದಕ್ಷಿಣದ ಕಡಲತೀರ ಪ್ರದೇಶವಾದ ಖೇರ್ಸನ್‌ ಅನ್ನು ಸಂಪೂರ್ಣ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಆದರೆ ಖೇರ್ಸನ್‌ ಇನ್ನೂ ತನ್ನ ವಶದಲ್ಲೇ ಇರುವುದಾಗಿ ಉಕ್ರೇನ್‌ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ ಈ ನಗರದ ವಶದ ಕುರಿತು ಗೊಂದಲ ಇದೆ.

ಜೊತೆಗೆ ಆಯಕಟ್ಟಿನ ಪ್ರದೇಶಗಳಲ್ಲಿರುವ ಬಂದರು ನಗರಿಗಳಾದ ಒಡೆಸಾ ಮತ್ತು ಮರಿಯುಪೋಲ್‌ ನಗರಗಳನ್ನು ಸುತ್ತುವರೆದಿದ್ದು ಅವುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ರಷ್ಯಾ ಚುರುಕುಗೊಳಿಸಿವೆ. ಉತ್ತರದ ಶೆರಿನಿಯವ್‌ ನಗರದ ಮೇಲೂ ಕ್ಷಿಪಣಿ ದಾಳಿ ಮಾಡಿದೆ.

Video Top Stories