Russia Ukraine War: ಇದುವರೆಗೂ 3500 ಮಂದಿಯನ್ನು ಬಲಿ ಪಡೆದಿದೆ ಯುದ್ಧ

ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ರಷ್ಯಾ- ಉಕ್ರೇನ್ ಯುದ್ಧದಲ್ಲಿ 3500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.  ಇನ್ನು ರಷ್ಯಾ-ಉಕ್ರೇನ್‌ ನಡುವಿನ ಸಂಘರ್ಷ ಮಹತ್ವದ ತಿರುವು ಪಡೆದುಕೊಂಡಿದೆ.

First Published Feb 28, 2022, 1:10 PM IST | Last Updated Feb 28, 2022, 1:10 PM IST

ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ರಷ್ಯಾ- ಉಕ್ರೇನ್ ಯುದ್ಧದಲ್ಲಿ 3500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.  ಇನ್ನು ರಷ್ಯಾ-ಉಕ್ರೇನ್‌ ನಡುವಿನ ಸಂಘರ್ಷ ಮಹತ್ವದ ತಿರುವು ಪಡೆದುಕೊಂಡಿದೆ. ಸಂಧಾನಕ್ಕಾಗಿ ಬೆಲಾರಸ್‌ಗೆ ಬಂದಿರುವ ರಷ್ಯಾದ ನಿಯೋಗದ ಜತೆ ಉಕ್ರೇನ್‌ ನಿಯೋಗ ಶಾಂತಿ ಮಾತುಕತೆ ನಡೆಸಲಿದೆ ಎಂದು ಉಕ್ರೇನ್‌ ಅಧ್ಯಕ್ಷರ ಕಾರ್ಯಾಲಯ ಘೋಷಿಸಿದೆ.

ಇನ್ನೂ ನಿಶ್ಚಯವಾಗದ ಬೆಲಾರಸ್‌ ಗಡಿಯ ಪ್ರದೇಶವೊಂದರಲ್ಲಿ ರಷ್ಯಾ ಮತ್ತು ಉಕ್ರೇನ್‌ ನಿಯೋಗಗಳು ಭೇಟಿಯಾಗಲಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರ ಕಚೇರಿ ತಿಳಿಸಿದೆ. ಆದರೆ ಈ ಸಂಧಾನ ಸಭೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ನಡುವೆ, ಉಕ್ರೇನ್‌ ನಿಯೋಗದ ಭೇಟಿ ವೇಳೆ ಈ ಭಾಗದಲ್ಲಿ ಯಾವುದೇ ಯುದ್ಧವಿಮಾನಗಳ ಹಾರಾಟ ನಡೆಯುವುದಿಲ್ಲ ಹಾಗೂ ಯುದ್ಧ ಸಲಕರಣೆಗಳ ಬಳಕೆ ನಡೆಯುವುದಿಲ್ಲ ಎಂದು ಉಕ್ರೇನ್‌ಗೆ ಬೆಲಾರಸ್‌ ಭರವಸೆ ನೀಡಿದೆ.