ರಷ್ಯಾ -ಉಕ್ರೇನ್ ಯುದ್ಧ ಬೆನ್ನಲ್ಲೇ ಆರ್ಥಿಕತೆಯಲ್ಲಿ ಅಲ್ಲೋಲ ಕಲ್ಲೋಲ
ರಷ್ಯಾ -ಉಕ್ರೇನ್ನ ಡುವಿನ ಯುದ್ಧ ಈಗಾಗಲೇ ಅಂತಾರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಒಂದೆಡೆ ಕಚ್ಚಾ ತೈಲ ಬೆಲೆ, ಇನ್ನೊಂದೆಡೆ ಚಿನ್ನದ ಬೆಲೆ ಗಗನ ಮುಟ್ಟಿದೆ.
ರಷ್ಯಾ (Russia)-ಉಕ್ರೇನ್ (Ukraine) ನಡುವಿನ ಯುದ್ಧ ಈಗಾಗಲೇ ಅಂತಾರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅತ್ತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸುತ್ತಿದ್ದಂತೆ ಇತ್ತ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಕಚ್ಚಾ ತೈಲ (Crude Oil) ಬೆಲೆಯಲ್ಲಿ (Price) ಪ್ರತಿ ಬ್ಯಾರಲ್ ಗೆ 100 ಡಾಲರ್ ಏರಿಕೆಯಾಗಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹೆಚ್ಚಳ ಕಂಡುಬಂದಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿದೆ. ಅಂತಾರಾಷ್ಟ್ರೀಯ (International) ಮಾರುಕಟ್ಟೆಯಲ್ಲಿ ಚಿನ್ನದ (Gold) ಬೆಲೆಯಲ್ಲಿ ಕೂಡ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ.
RUSSIA UKRAINE CRISIS: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್!
ರಷ್ಯಾದೊಂದಿಗೆ ಭಾರತ (India) ಬೃಹತ್ ವ್ಯಾಪಾರ (Trade) ಸಂಬಂಧ ಹೊಂದಿದೆ. ಹೀಗಾಗಿ ರಷ್ಯಾ-ಉಕ್ರೇನ್ ಸಂಘರ್ಷ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರೋದ್ರಲ್ಲಿ ಎರಡು ಮಾತಿಲ್ಲ. ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಕಂಪನ ಕಂಡುಬಂದಿದೆ. ದಿನದ ವಹಿವಾಟು ಪ್ರಾರಂಭಿಸುತ್ತಿದ್ದಂತೆ 1428 ಅಂಕಗಳ ಕುಸಿತ ದಾಖಲಿಸಿದೆ.