ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಅಮೆರಿಕದಲ್ಲಿ ಟ್ರಂಪ್ ಬೆಂಬಲಿತ 'ನಿರ್ಬಂಧ ಮಸೂದೆ' ಮಂಡನೆಯಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಒತ್ತಡ ಹೇರುವ ಈ ಮಸೂದೆಯಿಂದ ಭಾರತ, ಚೀನಾದಂತಹ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ರಷ್ಯಾದಿಂದ ತೈಲ ಖರೀದಿ ಮಾಡುವ ದೇಶಗಳಿಗೆ ಕಡಿವಾಣ ಹಾಕಲು ನಾನಾ ತಂತ್ರ ಹೆಣೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಂಥ ದೇಶಗಳ ಮೇಲೆ ಶೇ.500ರಷ್ಟು ತೆರಿಗೆ ಹಾಕಲು ಅವಕಾಶ ಕಲ್ಪಿಸುವ ‘ರಷ್ಯಾ ನಿರ್ಬಂಧ ಮಸೂದೆ’ ಮಂಡನೆಗೆ ಹಸಿರು ನಿಶಾನೆ ತೋರಿದ್ದಾರೆ.