
Russia-Ukraine War: ರಷ್ಯಾ ಮೇಲೆ ಜೈವಿಕ ಅಸ್ತ್ರ ಬಳಸಿದ್ಯಾ ಉಕ್ರೇನ್ ಪಡೆ.?
ಬಾವಲಿ ಹಾಗೂ ಇನ್ನಿತರ ಪಕ್ಷಿಗಳನ್ನು ಜೈವಿಕ ಅಸ್ತ್ರವಾಗಿ ಬಳಸಿ ದಾಳಿ ನಡೆಸಲು ಉಕ್ರೇನ್ ಸಂಚು ನಡೆಸಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ.
ಬಾವಲಿ ಹಾಗೂ ಇನ್ನಿತರ ಪಕ್ಷಿಗಳನ್ನು ಜೈವಿಕ ಅಸ್ತ್ರವಾಗಿ ಬಳಸಿ ದಾಳಿ ನಡೆಸಲು ಉಕ್ರೇನ್ ಸಂಚು ನಡೆಸಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ರಷ್ಯಾದ ರಾಯಭಾರಿ ವಾಸಿಲಿ ನೆಂಬೆಂಝಿಯಾ ಉಕ್ರೇನ್ ಬಾವಲಿ ಹಾಗೂ ದೂರ ರಾಷ್ಟ್ರಗಳಿಗೆ ವಲಸೆ ಹೋಗುವ ಪಕ್ಷಿಗಳನ್ನು ಬಳಸಿ ರಷ್ಯಾದಲ್ಲಿ ಮಾರಣಾಂತಿಕ ರೋಗಗಳನ್ನು ಹರಡಲು ಸಂಚು ಹೂಡಿದೆ. ಉಕ್ರೇನಿಗೆ ಜೈವಿಕ ಅಸ್ತ್ರಗಳನ್ನು ಉತ್ಪಾದಿಸಲು ಅಮೆರಿಕ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Russia-Ukraine War: ಲಿವಿವ್ ಸಮೀಪ 30 ಕ್ಷಿಪಣಿಗಳ ದಾಳಿ: 35 ಸಾವು
ಉಕ್ರೇನ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಕೊತ ಕೊತ ಕುದಿಯುತ್ತಿರುವ ಅಮೆರಿಕ ನೇರಾನೇರ 3ನೇ ವಿಶ್ವ ಯುದ್ಧದ ಎಚ್ಚರಿಕೆ ನೀಡಿದೆ. ‘ನ್ಯಾಟೋ ಸದಸ್ಯ ದೇಶಗಳ ಮೇಲೆ ದಾಳಿಯೇನಾದರೂ ಆದರೆ ಸುಮ್ಮನಿರುವುದಿಲ್ಲ. ಆ ದೇಶಗಳ ಪ್ರತಿ ಇಂಚು ಭೂಮಿಯನ್ನೂ ರಕ್ಷಿಸಿಕೊಳ್ಳುತ್ತೇವೆ. ಅದು ಮೂರನೇ ಮಹಾಯುದ್ಧಕ್ಕೆ ಕಾರಣವಾದರೂ ತೊಂದರೆ ಇಲ್ಲ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಗುಡುಗಿದ್ದಾರೆ.