Asianet Suvarna News Asianet Suvarna News

Russia- Ukraine War: ಲಿವಿವ್‌ ಸಮೀಪ 30 ಕ್ಷಿಪಣಿಗಳ ದಾಳಿ: 35 ಸಾವು

 ರಷ್ಯಾ- ಉಕ್ರೇನ್ ನಡುವಿನ ಯುದ್ಧ 19 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ಪೂರ್ವ, ಉತ್ತರ, ದಕ್ಷಿಣ ಭಾಗದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿರುವ ರಷ್ಯಾ ಇದೀಗ ಪಶ್ಚಿಮ ದಿಕ್ಕಿಗೂ ಲಗ್ಗೆ ಇಟ್ಟಿದೆ. 
 

First Published Mar 14, 2022, 12:15 PM IST | Last Updated Mar 14, 2022, 12:14 PM IST

ಬೆಂಗಳೂರು (ಮಾ. 14): ರಷ್ಯಾ- ಉಕ್ರೇನ್ ನಡುವಿನ ಯುದ್ಧ 19 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ಪೂರ್ವ, ಉತ್ತರ, ದಕ್ಷಿಣ ಭಾಗದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿರುವ ರಷ್ಯಾ ಇದೀಗ ಪಶ್ಚಿಮ ದಿಕ್ಕಿಗೂ ಲಗ್ಗೆ ಇಟ್ಟಿದೆ. 

ಉಕ್ರೇನ್‌ನ ಪಶ್ಚಿಮ ಭಾಗದ ತುದಿಯಲ್ಲಿರುವ ಲಿವಿವ್‌ನ ಯಾರೊವಿವ್‌ ಮಿಲಿಟರಿ ನೆಲೆ ಮೇಲೆ  30ಕ್ಕೂ ಹೆಚ್ಚು ಕ್ರೂಸ್‌ ಕ್ಷಿಪಣಿಗಳ ಮೂಲಕ ರಷ್ಯಾ ದಾಳಿ ನಡೆಸಿದೆ. ಈ ವೇಳೆ 35 ಮಂದಿ ಸಾವಿಗೀಡಾಗಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸೇನಾ ನೆಲೆ ಲಿವಿವ್‌ನಿಂದ 30 ಕಿ.ಮೀ. ದೂರದಲ್ಲಿದೆ. ನ್ಯಾಟೋ ರಾಷ್ಟ್ರವಾದ ಪೋಲೆಂಡ್‌ ಗಡಿಗೆ 35 ಕಿ.ಮೀ. ಸನಿಹದಲ್ಲಿದೆ.  ಮತ್ತೊಂದೆಡೆ, ಸ್ಲೋವೇಕಿಯಾ ಹಾಗೂ ಹಂಗೇರಿ ಗಡಿಯಲ್ಲಿರುವ ಉಕ್ರೇನ್‌ನ ಇವಾನೋ ಫ್ರಾಂಕಿವ್‌್ಸ$್ಕ ವಿಮಾನ ನಿಲ್ದಾಣ ಮೇಲೂ ರಷ್ಯಾದ ದಾಳಿ ಮುಂದುವರಿದಿದೆ.