Russia Ukraine War:ಮರಿಯೋಪೋಲ್ ಮೇಯರ್‌ ಕಿಡ್ನ್ಯಾಪ್ ಮಾಡಿದ ರಷ್ಯಾ

ರಷ್ಯಾ- ಉಕ್ರೇನ್ ನಡುವಿನ ಯುದ್ಧ 17 ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ತನ್ನ ವರಸೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದು, ದಾಳಿಯ ವ್ಯಾಪ್ತಿಯನ್ನೂ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿದೆ. ರಷ್ಯಾ ಪಡೆಗಳು ರಾಜಧಾನಿ ಕೀವ್‌ನ ವಶಕ್ಕೆ ಪ್ರಯತ್ನಿಸುತ್ತಿವೆ. 

First Published Mar 12, 2022, 3:33 PM IST | Last Updated Mar 12, 2022, 3:33 PM IST

ರಷ್ಯಾ- ಉಕ್ರೇನ್ ನಡುವಿನ ಯುದ್ಧ 17 ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ತನ್ನ ವರಸೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದು, ದಾಳಿಯ ವ್ಯಾಪ್ತಿಯನ್ನೂ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿದೆ. ರಷ್ಯಾ ಪಡೆಗಳು ರಾಜಧಾನಿ ಕೀವ್‌ನ ವಶಕ್ಕೆ ಪ್ರಯತ್ನಿಸುತ್ತಿವೆ. ಬಂದರು ನಗರಿ ಮರಿಯುಪೋಲ್‌ ಹಾಗೂ ಇತರ ನಗರಗಳ ಮೇಲೂ ಭಾರೀ ವಾಯುದಾಳಿ ನಡೆಸಿದೆ.

Operation Ganga: ಕಾರ್ಯಚರಣೆಗೆ ತೆರೆ, ತಾಯ್ನಾಡಿಗೆ ವಾಪಸ್ಸಾದ ವಿದ್ಯಾರ್ಥಿಗಳಲ್ಲಿ ಸಂತಸ

ಕಳೆದ 24 ಗಂಟೆಗಳಲ್ಲಿ ರಷ್ಯಾ ಸೇನೆಯು ಕೀವ್‌ ಕಡೆಗೆ 5 ಕಿ.ಮೀ.ನಷ್ಟುಧಾವಿಸಿ ಬಂದಿದೆ. ಇದೇ ವೇಳೆ, ಉಕ್ರೇನ್‌ನ ಸೇನೆ ಸೇರಿಕೊಂಡಿರುವ ನಾಗರಿಕರು ಶಸ್ತ್ರ ಹಿಡಿದು ಕೀವ್‌ ರಕ್ಷಣೆಗೆ ಮುಂದಾಗಿದ್ದಾರೆ. ಉಕ್ರೇನಿ ಪಡೆಗಳು ರಷ್ಯಾ ಪಡೆಗಳ ಮೇಲೆ ಪ್ರತಿದಾಳಿ ನಡೆಸಿವೆ. ದಕ್ಷಿಣದ ಮರಿಯುಪೋಲ್‌ ಹಾಗೂ ಇತರ ನಗರಗಳ ಮೇಲೆ ವಾಯುದಾಳಿ ಮುಂದುವರಿದಿದೆ. ಇಲ್ಲಿನ ಮೇಯರ್‌ನನ್ನು ಕಿಡ್ನ್ಯಾಪ್ ಮಾಡಿದೆ.