Operation Ganga: ಕಾರ್ಯಾಚರಣೆಗೆ ತೆರೆ, ತಾಯ್ನಾಡಿಗೆ ವಾಪಸ್ಸಾದ ವಿದ್ಯಾರ್ಥಿಗಳಲ್ಲಿ ಸಂತಸ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಲು ಆರಂಭಿಸಿದ್ದ ‘ಆಪರೇಶನ್‌ ಗಂಗಾ’ಕಾರ್ಯಾಚರಣೆಗೆ ತೆರೆ ಬಿದ್ದಿದೆ. 674 ಭಾರತೀಯರನ್ನು ಹೊತ್ತ 3 ವಿಮಾನಗಳು ಪೋಲೆಂಡ್‌ನಿಂದ ಶುಕ್ರವಾರ ದಿಲ್ಲಿಗೆ ಆಗಮಿಸಿದ್ದು, ಇದರೊಂದಿಗೆ ಕಾರ್ಯಾಚರಣೆಗೆ ಮುಕ್ತಾಯವಾಗಿದೆ. 

Share this Video
  • FB
  • Linkdin
  • Whatsapp

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಲು ಆರಂಭಿಸಿದ್ದ ‘ಆಪರೇಶನ್‌ ಗಂಗಾ’ಕಾರ್ಯಾಚರಣೆಗೆ ತೆರೆ ಬಿದ್ದಿದೆ. 674 ಭಾರತೀಯರನ್ನು ಹೊತ್ತ 3 ವಿಮಾನಗಳು ಪೋಲೆಂಡ್‌ನಿಂದ ಶುಕ್ರವಾರ ದಿಲ್ಲಿಗೆ ಆಗಮಿಸಿದ್ದು, ಇದರೊಂದಿಗೆ ಕಾರ್ಯಾಚರಣೆಗೆ ಮುಕ್ತಾಯವಾಗಿದೆ. 

ಕೊನೆಯ ತಂಡದಲ್ಲಿದ್ದ 674 ಜನರು ಉಕ್ರೇನ್‌ನ ಯುದ್ಧಪೀಡಿತ ಸುಮಿ ನಗರದಲ್ಲಿ ಸಿಲುಕಿದ್ದರು. ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಭಾರತ ಸರ್ಕಾರವು ತೆರವು ಕಾರ್ಯಾಚರಣೆಗೆ ಸಹಕರಿಸಿದ ರಷ್ಯಾ, ಉಕ್ರೇನ್‌, ಸ್ಲೊವಾಕಿಯಾ, ಹಂಗೇರಿ, ರೊಮೇನಿಯಾ, ಪೋಲೆಂಡ್‌ ದೇಶಗಳಿಗೆ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದೆ.

Related Video