ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ಟ್ರಂಪ್‌ ಸಜ್ಜು

ಕೊರೋನಾ ವೈರಸ್‌ ಹಾವಳಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶದ ಉದ್ಯೋಗಿಗಳ ಮೇಲೆ ಗದಾಪ್ರಹಾರ ಮಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಭಾರತೀಯ ಐಟಿ ಉದ್ಯೋಗಿಗಳ ಬಹುಬೇಡಿಕೆಯ ಎಚ್‌-1ಬಿ ಸೇರಿದಂತೆ ವಿವಿಧ ಔದ್ಯೋಗಿಕ ವೀಸಾಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವನ್ನು ಟ್ರಂಪ್‌ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

Share this Video
  • FB
  • Linkdin
  • Whatsapp

ನವದೆಹಲಿ (ಜೂ. 14): ಕೊರೋನಾ ವೈರಸ್‌ ಹಾವಳಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶದ ಉದ್ಯೋಗಿಗಳ ಮೇಲೆ ಗದಾಪ್ರಹಾರ ಮಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಭಾರತೀಯ ಐಟಿ ಉದ್ಯೋಗಿಗಳ ಬಹುಬೇಡಿಕೆಯ ಎಚ್‌-1ಬಿ ಸೇರಿದಂತೆ ವಿವಿಧ ಔದ್ಯೋಗಿಕ ವೀಸಾಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವನ್ನು ಟ್ರಂಪ್‌ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಮೆರಿಕ ಅಧ್ಯಕ್ಷ ಚುನಾವಣೆ: 73ರ ಟ್ರಂಪ್‌ ವರ್ಸಸ್‌ 77ರ ಬೈಡೆನ್‌!

ಈ ಕ್ರಮ ಈಗ ಜಾರಿಗೆ ಬಂದರೆ ಪ್ರಸಕ್ತ ಹಣಕಾಸು ವರ್ಷದ ಜೊತೆಗೆ, ಅ.1ರಿಂದ ಅಮೆರಿಕದಲ್ಲಿ ಆರಂಭವಾಗಲಿರುವ ಹೊಸ ಹಣಕಾಸು ವರ್ಷಕ್ಕೂ ಅದನ್ನು ವಿಸ್ತರಿಸುವ ಸಾಧ್ಯತೆ ಇದೆ. ಇದರಿಂದಾಗಿ, ಈಗಾಗಲೇ ಎಚ್‌-1ಬಿ ವೀಸಾ ಹೊಂದಿರುವ ನೌಕರರು ತಮ್ಮ ತವರಿಗೆ ತೆರಳಿದ್ದರೆ ವೀಸಾ ಅಮಾನತನ್ನು ಹಿಂಪಡೆಯುವವರೆಗೂ ಅಮೆರಿಕಕ್ಕೆ ಮರಳಲು ಆಗದು. ಈ ವೀಸಾದ ಮೇಲೆ ಹಾಲಿ ಅಮೆರಿಕದಲ್ಲಿರುವ ನೌಕರರಿಗೆ ಯಾವುದೇ ಸಮಸ್ಯೆಯಾಗದು ಎಂದು ವರದಿ ವಿವರಿಸಿದೆ.

Related Video