
ಕಾಳ್ಗಿಚ್ಚಿನಿಂದ ತತ್ತರಿಸಿರುವ ಅಮೆರಿಕಾಕ್ಕೆ ಹೊಸ ಅಸ್ತ್ರ? ಕಾಳ್ಗಿಚ್ಚಿಗೂ ಆ ಆಯುಧಕ್ಕೂ ಎತ್ತಣಿಂದೆತ್ತ ಸಂಬಂಧ?
ಅಮೆರಿಕದಲ್ಲಿ ಭೀಕರ ಕಾಳ್ಗಿಚ್ಚು ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಅಮೆರಿಕಾಗೆ ವರದಾನವಾಗಬಲ್ಲ ಒಂದು ಆಯುಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಲಾಸ್ ಎಂಜಲಿಸ್, ಕ್ಯಾಲಿಫೋರ್ನಿಯಾ ಭಾಗದಲ್ಲಿ ಹೊತ್ತಿಕೊಂಡಿದ್ದ ಬೆಂಕಿ, ನೋಡನೋಡುತ್ತಲೇ ಅಮೆರಿಕಾದ ಪಾಲಿಗೆ ಶಾಪವಾಗಿಬಿಟ್ಟಿತ್ತು. ಇವತ್ತಿಗೂ ಈ ಶಾಪದಿಂದ ಅಲ್ಲಿನ ಜನಕ್ಕೆ ಮುಕ್ತಿ ಸಿಕ್ಕಿಲ್ಲ. ಸಿಗೋ ಲಕ್ಷಣವೂ ಕಾಣ್ತಾ ಇಲ್ಲ. ಅದರ ಮಧ್ಯೆಯೇ ಅಮೆರಿಕಾದ ಪಾಲಿಗೆ ಒಂದು ವರದಾನ ಸಿಗೋ ಲಕ್ಷಣಗಳು ಗೋಚರಿಸ್ತಾ ಇದಾವೆ. ಆ ವರ ಯಾವುದು ಗೊತ್ತಾ? ಅದು ಒಲಿದು ಬರ್ತಾ ಇರೋದು ಎಲ್ಲಿಂದ ಗೊತ್ತಾ?
ನಾವು ಇವತ್ತು ಇದೇ ಪ್ರಶ್ನೆಗೆ ಉತ್ತರ ಕೊಡ್ತಾ ಇದೀವಿ. ಜಗತ್ತಿನ ಮೂಲೆ ಮೂಲೆಗೂ ವೆಪನ್ಸ್ ಕೊಟ್ಟು, ಯುದ್ಧ ಮಾಡೋಕೋ, ಅಥವಾ ಯುದ್ಧ ಮಾಡದ ಹಾಗೆ ತಡೆಯೋಕೆ ಅಮೆರಿಕಾ ಉತ್ಸುಕವಾಗಿದೆ. ಹಾಗಾಗಿನೇ, ತನ್ನೆಲ್ಲಾ ಟೆಕ್ನಾಲಜಿನೂ ವ್ಯಯ ಮಾಡಿ, ಅಂಥಾ ಆಯುಧಗಳನ್ನ ತಯಾರಿಸತ್ತೆ. ಆದ್ರೆ ಇನ್ನೊಂದು ದೇಶ ಇದೆ. ಅದೂ ಕೂಡ ಆಯುಧಗಳನ್ನ ತಯಾರಿಸುತ್ತೆ. ಈಗ ಅಂಥಧ್ದೇ ಒಂದು ಆಯುಧವನ್ನ ಅಮೆರಿಕಾಗೂ ಕೊಡೋಕೆ ಸಿದ್ಧವಿದೆ. ಅದು ಅಮೆರಿಕಾ ಪಾಲಿಗೆ ಬರೀ ಆಯುಧ ಅಲ್ಲ. ವರದಾನ. ಆ ಆಯುಧ ಯಾವ್ದು? ಅದರಿಂದ ಅಮೆರಿಕಾಗೆ ಏನು ಲಾಭ? ಈ ಕಾಳ್ಗಿಚ್ಚಿಗೂ ಆ ಆಯುಧಕ್ಕೂ ಎತ್ತಣಿಂದೆತ್ತ ಸಂಬಂಧ? ಅದೆಲ್ಲದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಹೆಚ್ಚೂಕಮ್ಮಿ ಎರಡು ವಾರಗಳೇ ಕಳೆದು, ಮೂರನೇ ವಾರಕ್ಕೆ ಕಾಲಿಟ್ಟಿದೆ ಅಮೆರಿಕಾದ ಕಾಳ್ಗಿಚ್ಚು. ಆದ್ರೆ, ಅದು ಈ ತನಕ ಕಂಟ್ರೋಲಿಗೆ ಸಿಕ್ಕಂತೆ ಕಾಣ್ತಾ ಇಲ್ಲ. ಕೈಗೆ ಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡಿದ ಬಳಿವೇ, ಆ ಪ್ರಳಯಾಗ್ನಿ ತಣ್ಣಗಾಗೋ ನಿರ್ಧಾರ ಕೈಗೊಂಡಿದೆ ಅನ್ಸುತ್ತೆ.. ಅಷ್ಟ್ರಲ್ಲಿ ಅರ್ಧ ಲಾಸ್ ಏಂಜಲಿಸ್ ಹಾಗೂ ಕ್ಯಾಲಿಫೋರ್ನಿಯಾ ಭಾಗ ಪೂರ್ತಿ ಆಹುತಿಯಾಗಿರುತ್ತೋ ಏನೋ.