Asianet Suvarna News Asianet Suvarna News

ಒಂದು ಟ್ವೀಟ್, 18 ಕೋಟಿ ಮೌಲ್ಯ: ಬಯಲಾಯ್ತು ರೈತ ಹೋರಾಟ ಬೆಂಬಲದ ಅಸಲಿಯತ್ತು!

Feb 7, 2021, 12:25 PM IST

ನವದೆಹಲಿ(ಫೆ.07) ಆಕೆಯ ಎಂಟು ಶಬ್ಧದ ಒಂದು ಟ್ವೀಟ್‌ಗೆ ಹದಿನೆಂಟು ಕೋಟಿ. ಇದು ನಿಜಾನಾ? ರೈತ ಹೋರಾಟದ ಹಿಂದೆ ಖಲಿಸ್ತಾನ್ ಖದೀಮ ಬೆಂಕಿ ಹಚ್ಚೇ ಬಿಡ್ತಾನಾ? ಪಿಜೆಎಫ್‌ ಪಾಪಿಯ ಸ್ಕೈ ರಾಕೆಟ್ ಹಾಗೂ ಡಿವೈಡ್ ಇಂಡಿಯಾ ಸಂಚು. ಸೆಲೆಬ್ರಿಟಿಗಳ ಶಾಕಿಂಗ್ ಟ್ವೀಟ್, ನಿಗೂಢ ಟೂಲ್‌ಕಿಟ್ ಹೋರಾಟ ಹಿಂದಿನ ಅಸಲಿ ಮುಖದ ಅನಾವರಣವಾಗಿದೆ.

ಇನ್ನೂ 9 ತಿಂಗಳು ರೈತ ಪ್ರತಿಭಟನೆ ಖಚಿತ; ಶೀಘ್ರದಲ್ಲೇ ದೇಶಾದ್ಯಂತ ಮತ್ತೊಂದು ಹೋರಾಟ!

ಹೌದು ನಿರಂತರವಾಗಿ ರೈತ ಹೋರಾಟ ನಡೆಯುತ್ತಿದೆ. ಮೋದಿ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನೇ ದಿನೇ ಹೆಚ್ಚುತ್ತಿದೆ. ಈಈಗ ಈ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ. ಇದಕ್ಕೆ ಕಾರಣ ವವಿದೇಶೀ ಸೆಲೆಬ್ರಿಟಿಗಳು ಇದಕ್ಕೆ ಬೆಂಬಲ ನೀಡಿರುವುದು. ಆದ್ರೆ ಇದರ ಹಿಂದಿನ ಉದ್ದೇಶ ಸದ್ಯ ಒಂದೊಂದಾಗೇ ಹೊರ ಬರುತ್ತಿದೆ.

ಒಂದೆಡೆ ಚಕ್ಕಾ ಜಾಮ್, ಇನ್ನೊಂದೆಡೆ ರೈತ ಮುಖಂಡರಿಗೆ ಕೃಷಿ ಕಾಯ್ದೆ ಬಗ್ಗೆ ಪಾಠ ಮಾಡಿದ ರೈತ.!

ಒಂದೇ ಒಂದು ಟ್ವೀಟ್ ಮಾಡಿ ಮೇಡಂ ಎಂದು ಪಾಪ್ ಸಿಂಗರ್ ಒಬ್ಬರಿಗೆ ಸಂದಾಯವಾದ ಮೊತ್ತ ಎಷ್ಟು ಗೊತ್ತಾ? ಹದಿನೆಂಟಟು ಕೋಟಿ. ಅಷ್ಟಕ್ಕೂ ಆತ ಯಾರು? ಕೆನಡಾದಲ್ಲಿದ್ದುಕೊಂಡು ಬೆಂಕಿ ಹಚ್ಚುತ್ತಿರುವ ಈತನಿಗೆ ಈ ಪ್ರತಿಭಟನರೆಯಿಂದ ಏನು ಲಾಭ? ಸಂಪೂರ್ಣ ವಿವರ ಇಲ್ಲಿದೆ ನೋಡಿ