ಪಾಪರ್ ಆಗೋ ಭೀತಿಯಲ್ಲಿದ್ದ ಪಾಕ್‌ಗೆ ಬಂಪರ್! ವಿಭಜನೆಗೂ ಮುಂಚೆ ಭಾರತದಲ್ಲಿದ್ದ ಅತ್ಯಮೂಲ್ಯ ಸಂಪತ್ತು ಪಾಕ್ ಪಾಲು!
ಪಾಪರ್ ಆಗಿ ಜಗತ್ತಿನ ಮುಂದೆ ಬಿಕ್ಷಾಪಾತ್ರೆ ಹಿಡಿದು ನಿಂತಿರುವ ಪಾಕಿಸ್ತಾನಕ್ಕೆ ಇದೀಗ ಬಂಪರ್ ಲಾಟರಿ ಹೊಡೆದ ಅನುಭವವಾಗಿದೆ. ವಿಭಜನೆಗೂ ಮುಂಚೆ ಭಾರತದಲ್ಲಿ ಅಪಾರ ಚಿನ್ನದ ನಿಕ್ಷೇಪ ಇದೀಗ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ.
ಬೆಂಗಳೂರು 15 ಆಗಸ್ಟ್ 1947, ಆ ದಿನ, ಭಾರತ ಸ್ವತಂತ್ರವಾಯ್ತು. ಅದೇ ದಿನ, ಭಾರತದ ವಿಭಜನೆಯೂ ಆಯ್ತು. ಪಕ್ಕದಲ್ಲೇ ಪಾಕಿಸ್ತಾನ ಅನ್ನೋ ಪಾಪಿ ದೇಶವೂ ಹುಟ್ಟಿಕೊಳ್ತು. ಅವತ್ತಿನಿಂದ ಭಾರತ, ಪ್ರಗತಿಯ ದಿಕ್ಕಲ್ಲಿ ಮುಂದುವರೀತಿದೆ. ಪಾಕಿಸ್ತಾನ ಪಾತಾಳದ ಕಡೆ ಮುಖ ಮಾಡಿ ಅಂತಿಮಯಾತ್ರೆ ಹೊರಟಿದೆ. ಆದ್ರೆ ಈಗ, ಪಾಕಿಸ್ತಾನದಲ್ಲೊಂದು ಸಂಚಲನಾತ್ಮಕ ಸಂಗತಿ ಬೆಳಕಿಗೆ ಬಂದಿದೆ. ವಿಭಜನೆಗೂ ಮುಂಚೆ ಭಾರತದಲ್ಲಿದ್ದ ಅತ್ಯಮೂಲ್ಯ ಸಂಪತ್ತು. ಪಾಕಿಸ್ತಾನದ ಪಾಲಾಗಿದೆ. ಆ ಕತೆ ಏನು ಗೊತ್ತಾ?