Asianet Suvarna News Asianet Suvarna News

ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು?

ಮೊದಲು ಹಮಾಸ್...ಬಳಿಕ ಹಿಜ್ಬುಲ್ಲಾ…ಈಗ ಇರಾನ್..ಎಲ್ಲರೂ ಒಟ್ಟಾಗಿ ಮುಗಿ ಬಿದ್ದಿರೋದು ಇಸ್ರೇಲ್ ಮೇಲೆ. ಆದ್ರೆ ಆ ಗಟ್ಟಿರಾಷ್ಟ್ರ ಯಾರ ದಾಳಿಗೂ ಗಪ್‌ಛುಪ್ ಆಗಿಲ್ಲ, ಇರಾನ್ ಇಸ್ರೇಲ್ ನಡುವಣ ಈ ತೀವ್ರಗೊಂಡ ಯುದ್ಧ 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯುತ್ತಾ ಇಲ್ಲಿದೆ ಡಿಟೇಲ್ ಸ್ಟೋರಿ..

First Published Oct 8, 2024, 5:29 PM IST | Last Updated Oct 8, 2024, 5:29 PM IST

ಸೇಡು..ಸಮರ..ಸಾವು..ನೋವು..ಮಧ್ಯಪ್ರಾಚ್ಯದಲ್ಲಿ ಹೊತ್ತಿಕೊಂಡ ಕದನ ಕಿಚ್ಚಿಗೆ ಒಂದು ವರ್ಷ. ಆ ಕಿಚ್ಚೀಗ ಜ್ವಾಲಾಮುಖಿಯಂತೆ ವ್ಯಾಪಿಸಿದೆ. ಅಲ್ಲಿ ಆರಂಭವಾಗಿರೋದು ರಣಭೀಕರ ರಕ್ತಸಿಕ್ತ ಅಧ್ಯಾಯ. ತಣ್ಣಗಿದ್ದ ಇಸ್ರೇಲ್‌ನ ತಟ್ಟಿ ಎಬ್ಬಿಸಿದ್ದ ಹಮಾಸ್ ಈಗ ಹೆದರಿ ಹೆಡೆ ಮಡಚಿದೆ. ಹಿಜ್ಬುಲ್ಲಾ ಹೌಹಾರಿ ಹೋಗಿದೆ. ಪರದೆ ಹಿಂದೆ ಕದನದ ಆಟ ಆಡ್ತಿದ್ದ ಇರಾನ್ ಇಳಿದಿರೋದೀಗ ಡೈರೆಕ್ಟ್ ಅಟ್ಯಾಕ್‌ಗೆ. ಇಸ್ರೇಲ್- ಇರಾನ್ ನೇರಾನೇರಾ ಸಮರದಲ್ಲಿ ಇನ್ನೆಷ್ಟು ನೆತ್ತರ ಕೋಡಿ ಹರಿಯುತ್ತೋ ಗೊತ್ತಿಲ್ಲ. ಆದ್ರೆ,  ಅವರದ್ದು ಶಪಥ.. ಇವರದ್ದು ಪ್ರತಿಜ್ಞೆ..ಇದೇ ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾ..? ಮಿಡಲ್ ಈಸ್ಟ್‌ನ ಈ ರಣಕಣದ ರೋಚಕ ಸ್ಟೋರಿಯೇ 365 ರಕ್ತಚರಿತ್ರೆ ವೀಕ್ಷಿಸಿ ಈ ವೀಡಿಯೋ