ತಾಲಿಬಾನ್ ಸರ್ಕಾರಕ್ಕೆ ಒಂದು ವರ್ಷ: 365 ದಿನದಲ್ಲಿ ಗಾಂಧಾರದಲ್ಲಿ ಬದಲಾಗಿದ್ದೇನೇನು?
ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರು ನರಕಾಡಳಿತ ಸ್ಥಾಪನೆ ಮಾಡಿ ಬರೋಬರಿ ಒಂದು ವರ್ಷವಾಗಿದ್ದು, ಒಂದು ವರ್ಷದಲ್ಲಿ ತಾಲಿಬಾನ್‌ನಲ್ಲಿ ಏನೇನಾಗಿದೆ ಎಂಬುದರ ಡಿಟೇಲ್ ಈ ವಿಡಿಯೋದಲ್ಲಿದೆ.
vಕಾಬೂಲ್: ನಮ್ಮ ಭಾರತ ಇನ್ನು 75ನೇ ಸ್ವಾತಂತ್ರ ಮಹೋತ್ಸವದ ಸಂಭ್ರಮದ ಗುಂಗಿನಿಂದ ಹೊರ ಬಂದಿಲ್ಲ. ಆದರೆ ದೂರದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರು ನರಕಾಡಳಿತ ಸ್ಥಾಪನೆ ಮಾಡಿ ಬರೋಬರಿ ಒಂದು ವರ್ಷವಾಗಿದ್ದು, ಒಂದು ವರ್ಷದಲ್ಲಿ ತಾಲಿಬಾನ್‌ನಲ್ಲಿ ಏನೇನಾಗಿದೆ ಎಂಬುದನ್ನು ತಿಳಿದರೆ ದಂಗು ಬಡಿಯುತ್ತದೆ. ತಾಲಿಬಾನ್ ಆಡಳಿತ ಬಂದಾಗಿನಿಂದ ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ಮಕ್ಕಳು ಹಾಗೂ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಬಡತನ ಯಾವ ರೀತಿ ಕಾಡುತ್ತಿದೆ ಎಂದರೆ ತಿನ್ನಲು ಅನ್ನವಿಲ್ಲದೇ ಜನ ಪರದಾಡುತ್ತಿದ್ದಾರೆ. ಕೆಳಗೆ ಬಿದ್ದ ಸಣ್ಣ ಆಃರದ ತುಣಕನ್ನು ಹೆಕ್ಕಿ ತಿನ್ನುವಂತಹ ಪರಿಸ್ಥಿತಿ ಅಲ್ಲಿದೆ. ಇನ್ನು ಹೆಣ್ಣು ಮಕ್ಕಳ ಬದುಕು ಬಹುತೇಕ ಅಂಧಾಕಾರದಲ್ಲಿ ಕಳೆಯುತ್ತಿದೆ. ಇಲ್ಲಿನ ಶ್ರೀಮಂತರ ಬಳಿಯೂ ಹಣವಿಲ್ಲ. ಇನ್ನು ಇಲ್ಲಿ ದುಡಿದ ಕೂಲಿಯನ್ನು ಪಡೆಯಲು ದಿನಗಟ್ಟಲೇ ಕ್ಯೂ ನಿಲ್ಲುವಂತಹ ದುಸ್ಥಿತಿ ಇದ್ದು, ದೇಶ ಅಧೋಗತಿಗೆ ಸಾಗಿದೆ. ಅಫ್ಘಾನಿಸ್ತಾನದ ವಾಸ್ತವ ಚಿತ್ರಣದ ಸಂಪೂರ್ಣ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.