Omicron Variant: ಬ್ರಿಟನ್‌ನಲ್ಲಿ ಮೊದಲ ಸಾವು, ಬೂಸ್ಟರ್ ಡೋಸ್ ಕೆಲಸ ಮಾಡಲ್ಲ, ಜಗತ್ತಿನಾದ್ಯಂತ ಭೀತಿ

ಆಫ್ರಿಕಾ ಖಂಡದಲ್ಲಿ ಮೊದಲು ಪತ್ತೆಯಾಗಿ ಬಳಿಕ ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್‌ (Omicron Variant)  ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟನ್ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 16): ಆಫ್ರಿಕಾ ಖಂಡದಲ್ಲಿ ಮೊದಲು ಪತ್ತೆಯಾಗಿ ಬಳಿಕ ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್‌ (Omicron Variant) ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟನ್ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಒಮಿಕ್ರೋನ್‌ ಸಾಂಕ್ರಾಮಿಕವಾದರೂ, ಅಷ್ಟೊಂದು ತೀವ್ರತೆ ಹೊಂದಿಲ್ಲ ಎಂಬ ವರದಿಗಳ ಬೆನ್ನಲ್ಲೇ ಮೊದಲ ಸಾವು ದಾಖಲಾಗಿರುವುದು ವಿಶ್ವದಾದ್ಯಂತ ಆತಂಕ ಹುಟ್ಟುಹಾಕಿದೆ.

Delta or Omicron: ಈ ಎರಡು ರೂಪಾಂತರಿ ವೈರಸ್ ಗುರುತಿಸುವುದು ಹೇಗೆ.?

ಬ್ರಿಟನ್‌ನಲ್ಲಿ ಒಮಿಕ್ರೋನ್ ಪ್ರಕರಣಗಳ ಸಂಖ್ಯೆ ವೇಗವಾಗಿ ದ್ವಿಗುಣವಾಗುತ್ತಿದೆ. ಇಂಗ್ಲೆಂಡ್‌ನಲ್ಲಿ ದಾಖಲಾಗುತ್ತಿರುವ ಕೇಸಲ್ಲಿ ಒಮಿಕ್ರೋನ್‌ ಪಾಲು ಶೇ.20 ತಲುಪಿದೆ, ಲಂಡನ್‌ನಲ್ಲಿ ಈಗಾಗಲೇ ಇದು ಶೇ.44ಕ್ಕೇರಿದೆ.

ಭಾರತದಲ್ಲಿ ಒಟ್ಟು ಒಮಿಕ್ರೋನ್ ಸೋಂಕಿತರ ಸಂಖ್ಯೆ 68 ಕ್ಕೆ ಏರಿಕೆಯಾಗಿದೆ. ಇನ್ನು ಬೂಸ್ಟರ್‌ ಡೋಸ್‌ ಸಹ ಒಮಿಕ್ರೋನ್‌ ವೈರಸ್‌ನಿಂದ ಖಚಿತವಾಗಿ ರಕ್ಷಿಸುತ್ತದೆ ಎಂಬುದಕ್ಕೆ ಸಾಕ್ಷ್ಯಗಳೇನೂ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. 

Related Video