Asianet Suvarna News Asianet Suvarna News

ಲಡಾಕ್‌ ಪ್ರದೇಶಕ್ಕೆ ಮೋದಿ ಅಚ್ಚರಿಯ ಭೇಟಿ; ಹಿಂದಿರುವ ಸೂತ್ರಧಾರ ಇವರೇ..!

ಪ್ರಧಾನಿ ಮೋದಿ ಲಡಾಖ್‌ಗೆ ಖುದ್ದು ಭೇಟಿ ನೀಡುವುದರಿಂದ ವ್ಯೂಹಾತ್ಮಕವಾಗಿ ಭಾರತಕ್ಕೆ ಲಾಭವಾಗಲಿದೆ ಎಂಬುದನ್ನು ಅರಿತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು, ಇದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿದರು. 

ನವದೆಹಲಿ (ಜು. 05):  ಪೂರ್ವ ಲಡಾಖ್‌ನ ಗಲ್ವಾನ್‌ ಹಾಗೂ ಪಾಂಗ್ಯಾಂಗ್‌ ಸರೋವರ ತನ್ನದೆಂದು ಭಾರತದ ವಿರುದ್ಧ ಗಡಿ ಬಿಕ್ಕಟ್ಟು ಸೃಷ್ಟಿಸಿದ ನೆರೆಯ ಚೀನಾಕ್ಕೆ ಕಠಿಣ ಸಂದೇಶ ರವಾನಿಸಲು ಭೂಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ಬುಧವಾರವಷ್ಟೇ ಹೊರಬಿದ್ದಿತ್ತು. ಆದರೆ, ಉಭಯ ರಾಷ್ಟ್ರಗಳ ವಾಸ್ತವ ಗಡಿರೇಖೆಯಲ್ಲಿ ಬೀಡುಬಿಟ್ಟಿರುವ ಚೀನಾ ಮತ್ತು ಭಾರತದ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಸಂಬಂಧ ಕಮಾಂಡರ್‌ ಹಂತದ ಮಾತುಕತೆ ನಡೆದಿತ್ತು. ಹೀಗಾಗಿ, ಚೀನಾದ ನಡೆ ಏನು ಎಂಬುದನ್ನು ಕಾದು ನೋಡುವ ತಂತ್ರವಾಗಿ ರಾಜನಾಥ್‌ ಸಿಂಗ್‌ ಅವರ ಲಡಾಖ್‌ ಭೇಟಿ ರದ್ದಾಗಿದೆ ಎನ್ನಲಾಗಿತ್ತು.

ಚೀನಾಗೆ ಭಾರತ ಟಕ್ಕರ್; ಗಡಿಯಲ್ಲಿ ಯೋಧರನ್ನು ಭೇಟಿ ಮಾಡಿದ ಮೋದಿ

ಈ ನಡುವೆ ಲಡಾಖ್‌ಗೆ ಖುದ್ದು ಭೇಟಿ ನೀಡುವುದರಿಂದ ವ್ಯೂಹಾತ್ಮಕವಾಗಿ ಭಾರತಕ್ಕೆ ಲಾಭವಾಗಲಿದೆ ಎಂಬುದನ್ನು ಅರಿತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು, ಇದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿದರು. ಮೋದಿ ಅವರೇ ಭೇಟಿ ನೀಡಲಿದ್ದಾರೆ ಎಂಬ ವಿಚಾರ ಎಲ್ಲಿಯೂ ಲೀಕ್‌ ಆಗದಂತೆಯೇ ಹೆಚ್ಚು ಮುತುವರ್ಜಿ ವಹಿಸಿದ ದೋವಲ್‌, ಮೋದಿ ಲೇಹ್‌ನಲ್ಲಿ ಯಾವೆಲ್ಲಾ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂಬುದರ ಸಂಪೂರ್ಣ ಯೋಜನೆಯನ್ನು ರೂಪಿಸಿದ್ದರು. ಅಲ್ಲದೆ, ಅದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ್ದಾರೆ.

 

Video Top Stories