ಬೆಂಕಿ ಸ್ಟಂಟ್‌ ಮಾಡಲು ಹೋಗಿ ಮುಖ ಸುಟ್ಟುಕೊಂಡ ಭೂಪ!

ಬೆಂಕಿಯೊಂದಿಗೆ ಸರಸ ಮಾಡಲು ಹೋಗಿ ವ್ಯಕ್ತಿಯೊಬ್ಬನ ಮುಖವೇ ಸುಟ್ಟು ಹೋಗಿದೆ. ವಿದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಬೆಂಕಿಯೊಂದಿಗೆ ಸರಸ ಮಾಡಲು ಹೋಗಿ ವ್ಯಕ್ತಿಯೊಬ್ಬನ ಮುಖವೇ ಸುಟ್ಟು ಹೋಗಿದೆ. ವಿದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರೆದುರು ಬೆಂಕಿ ಉಗುಳುವ ಸ್ಟಂಟ್ ಮಾಡಲು ಹೋದ ಯುವಕನ ಮುಖಕ್ಕೆ ಒಮ್ಮೆಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಬೆಂಕಿ ನಂದಿಸುವ ಪ್ರಯತ್ನವನ್ನು ಆತ ಮಾಡಿದರು ಕೆಲವು ಸೆಕೆಂಡುಗಳ ಕಾಲ ಮುಖ ಧಗ ಧಗ ಎನಿಸಿದೆ. ನಂತರ ಅಲ್ಲೇ ಇದ್ದವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಆಘಾತ ವ್ಯಕ್ತಪಡಿಸಿದ್ದಾರೆ. 

Related Video