ಮನೆಯಲ್ಲೇ ಮೊಸಳೆ ಸಾಕಿದ ಭೂಪ: ಕಿಲ್ಲರ್ ಮೊಸಳೆಯೊಂದಿಗೆ ಆಟ
ವ್ಯಕ್ತಿಯೊಬ್ಬ ಮೊಸಳೆ ಸಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಕ್ಕು ನಾಯಿ, ಕೋಳಿ ಹಸು ಮುಂತಾದ ಪ್ರಾಣಿಗಳನ್ನು ಮನೆಯಲ್ಲೇ ಸಾಕುವುದನ್ನು ನೀವು ಕೇಳಿರಬಹುದು. ಆದರೆ ನೋಡಿದರೆ ಹೆದರಿ ಓಡುವಂತಹ ಭಯಾನಕ ಪ್ರಾಣಿಯಾದ ಮೊಸಳೆಯನ್ನು ಮನೆಯಲ್ಲಿ ಸಾಕಿದ್ದನ್ನು ಯಾರಾದರು ನೋಡಿದ್ದೀರಾ. ನೋಡಿಲ್ಲ ಎಂದಾದರೆ ಇಲ್ಲೊಂದು ಕಡೆ ಅದನ್ನೂ ನೋಡಬಹುದು. ವ್ಯಕ್ತಿಯೊಬ್ಬ ಮೊಸಳೆಯೊಂದಿಗೆ ಮನೆಯಲ್ಲಿ ಸಾಕುನಾಯಿಗಳೊಂದಿಗೆ ಆಟವಾಡುವಂತೆ ಆಟವಾಡುತ್ತಿದ್ದು ಇದರ ವಿಡಿಯೋ ವೈರಲ್ ಆಗಿದೆ.