Asianet Suvarna News Asianet Suvarna News

ಸಿಗೋ ಹಾವನ್ನೆಲ್ಲ ಹಿಡಿದು ನುಂಗುತ್ತಿದ್ದ ರೈತ: ಈ ಬಾರಿ ಬಚಾವಾಗ್ಲಿಲ್ಲ

ಹಾವನ್ನು ನುಂಗುವ ವೇಳೆ ವಿಷಕಾರಿ ಮಂಡಲ ಹಾವು ನಾಲಗೆಗೆ ಕಚ್ಚಿ ಅಲರ್ಜಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೃಷಿಕನಾಗಿದ್ದ ಈ ಆಗಾಗ ಸಿಗುವ ಹಾವುಗಳನ್ನು ನುಂಗುತ್ತಿದ್ದ. ಮಂಡಲ ಹಾವಿನ ಜೊತೆ ಇದೇ ಸಾಹಸ ಮಾಡಿದ್ದ.

Sep 27, 2021, 9:22 AM IST

ಭೂಪನೊಬ್ಬ ವಿಷಕಾರಿ ಹಾವನ್ನು ನುಂಗುವ ಸಾಹ ಮಾಡಿದ್ದ. ಎರಡು ಸಲ ಬಚಾವಾಗಿದ್ದಾತ ಮೂರನೇ ಬಾರಿ ಹಾವನ್ನು ನುಂಗಲು ಹೋಗಿ ಪ್ರಾಣಬಿಟ್ಟಿದ್ದಾನೆ. ರಷ್ಯಾದ ವ್ಯಕ್ತಿಯೊಬ್ಬ ಹಾವನ್ನೇ ನುಂಗುವ ಸಾಹಸ ಮಾಡಿದ್ದಾನೆ. ಅಸ್ಟ್ರಾಖಾನ್ ವಲಯದಲ್ಲಿ ಈ ಘಟನೆ ನಡೆದಿದ್ದು ಹಾವನ್ನು ನುಂಗುವ ಸಾಹಸಿಗ ಅದರಿಂದಾಗಿಯೇ ಪ್ರಾಣಬಿಟ್ಟಿದ್ದಾನೆ.

ಮಹಾಭಾರತ ಶೀರ್ಷಿಕೆ ಗೀತೆ ಹಾಡಿದ ಮುಸ್ಲಿಂ ವ್ಯಕ್ತಿ!

ಹಾವನ್ನು ನುಂಗುವ ವೇಳೆ ವಿಷಕಾರಿ ಮಂಡಲ ಹಾವು ನಾಲಗೆಗೆ ಕಚ್ಚಿ ಅಲರ್ಜಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೃಷಿಕನಾಗಿದ್ದ ಈ ಆಗಾಗ ಸಿಗುವ ಹಾವುಗಳನ್ನು ನುಂಗುತ್ತಿದ್ದ. ಮಂಡಲ ಹಾವಿನ ಜೊತೆ ಇದೇ ಸಾಹಸ ಮಾಡಿದ್ದ. ಎರಡು ಬಾರಿ ಬಾಯೊಳಗೆ ಹಾಕಿ ತೆಗೆದಿದ್ದು ಮೂರನೇ ಬಾರಿ ಹಾವು ವ್ಯಕ್ತಿ ನಾಲಗೆಗೆ ಕಡಿದಿದೆ.