
ದ್ವೀಪ ರಾಷ್ಟ್ರದಲ್ಲಿ ಅರಾಜಕತೆಯ ತುತ್ತ ತುದಿಗೆ: ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಪರಾರಿ!
ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ನಾಗರಿಕರು ಉದ್ರಿಕ್ತರಾಗಿದ್ದು, ಅಧ್ಯಕ್ಷ ಗೊಟಬಾಯ ಪರಾರಿಯಾಗಿದ್ದಾರೆ.
ಕೊಲಂಬೋ(ಜು.09): ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಇಲ್ಲಿನ ನಾಗರಿಕರು ಸರ್ಕಾರದ ವಿರುದ್ಧ ಉದ್ರಿಕ್ತರಾಗಿದ್ದಾರೆ. ಹಿಂಸಾಚಾರ ಭುಗಿಲೆದ್ದಿದ್ದು, ಸರ್ಕಾರದ ವಿರುದ್ಧ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಜನರ ಈ ಭಾರೀ ಪ್ರತಿಭಟನೆಗೆ ಹೆದರಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ದೇಶಬಿಟ್ಟು ಪರಾರಿಯಾಗಿದ್ದಾರೆ.
ಹೌದು ಸಾವಿರಾರು ನಾಗರಿಕರು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ನಿವಾಸಕ್ಕೆ ನುಗ್ಗಿದ್ದರು. ಈ ನಡುವೆ ರಾಜಪಕ್ಸರನ್ನು ಅಧಿಕಾರಿಗಳು ಸೇನಾನೆಲೆಗೆ ಕರೆದೊಯ್ದಿದ್ದಾರೆ. ಇದರಿಂದ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.