ಉಗ್ರರಿಗೆ ಯಾಕೆ ಸ್ವಾತಂತ್ರ್ಯ ಹೋರಾಟಗಾರನ ಪಟ್ಟ..? ಇಸ್ರೇಲ್ ವಿರೋಧಿ ಉಗ್ರರ ಪರ ಇಲ್ಲಿ ಅನುಕಂಪ ಯಾಕೆ..?
ಹಮಾಸ್‍ನ ಏಕೆ ಉಗ್ರ ಸಂಘಟನೆ ಎಂದು ಘೋಷಿಸಬೇಕು?
ಇಸ್ರೇಲ್ ವಿರುದ್ಧ ಕ್ರಮ ತಗೆದುಕೊಳ್ಳಬೇಕೆಂದು ಒತ್ತಾಯ
ಕೇರಳದಲ್ಲಿ ಭಾಷಣ ಮಾಡಿದ ಹಮಾಸ್‌ನ ಖಲಿದ್ ಮಶಾಲ್
ಇಸ್ರೇಲ್ (Israel) ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಹಮಾಸ್(Hamas) ನಿರ್ನಾಮಕ್ಕೆ ಇಸ್ರೇಲ್ ಸೇನೆ ಪಣ ತೊಟ್ಟಿದೆ. ಕೆಲ ಮುಸ್ಲಿಂ ದೇಶಗಳು ಹಮಾಸ್ ಪರ ನಿಂತಿದ್ದು, ಇಸ್ರೇಲ್ ವಿರುದ್ಧ ಕಿಡಿಕಾರುತ್ತಿವೆ. ಹಮಾಸ್ ಉಗ್ರ ಸಂಘಟನೆಯ ಸಂಸ್ಥಾಪಕ ಸದಸ್ಯ ಖಲಿದ್ ಮಶಾಲ್(Khalid Mashaal) ಕೇರಳದಲ್ಲಿ(Kerala) ಭಾಷಣ ಮಾಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈತ 1996ರಿಂದ 2017ರವರೆಗೆ ಹಮಾಸ್ ಮುಖ್ಯಸ್ಥನಾಗಿದ್ದ, ವೆಸ್ಟ್ ಬ್ಯಾಂಕ್‍ನಲ್ಲಿ ಹಮಾಸ್ ನಾಯಕ ಖಲಿದ್ ಮಶಾಲ್ ಹುಟ್ಟಿದ್ದಾನೆ. ಕುವೈತ್, ಜೋರ್ಡಾನ್‍ನಲ್ಲಿ ಬೆಳೆದ ಮಶಾಲ್ ಈಗ ಕತಾರ್‌ನಲ್ಲಿ ವಾಸ ಮಾಡುತ್ತಿದ್ದಾನೆ. 4 ಬಿಲಿಯನ್ ಡಾಲರ್ ಆಸ್ತಿಯನ್ನು ಹಮಾಸ್ ಉಗ್ರ ಮಶಾಲ್ ಹೊಂದಿದ್ದಾನೆ. ಮುಸ್ಲಿಂ ಶಕ್ತಿಗಳು ಇಸ್ರೇಲ್ ವಿರುದ್ಧ ಒಂದಾಗಬೇಕೆಂದು ಉಗ್ರ ಭಾಷಣ ಮಾಡಿದ್ದಾನೆ.
ಇದನ್ನೂ ವೀಕ್ಷಿಸಿ: Today Horoscope: ಗಂಡನ ಆಯಸ್ಸಿನ ವೃದ್ಧಿಗೆ ಇಂದು ಸುಮಂಗಲಿಯರು ಗೌರಿ ಆರಾಧನೆ ಮಾಡಿ..