Asianet Suvarna News Asianet Suvarna News

ಇಸ್ರೇಲ್‌ ಸೈನಿಕರು 24 ಗಂಟೆಯೂ ನಮ್ಮನ್ನು ರಕ್ಷಿಸುತ್ತಿದ್ದಾರೆ: ಇಸ್ರೇಲ್‌ ಕನ್ನಡಿಗರು

ಅಮೆರಿಕ, ಜರ್ಮನಿ ಬಳಿಕ ಈಗ ಬ್ರಿಟನ್ ಸರದಿ
ಇಸ್ರೇಲ್ ಬೆನ್ನಿಗೆ ನಿಂತ ಪ್ರಧಾನಿ ರಿಷಿ ಸುನಕ್..!
ಬೆಂಜಮಿನ್ ನೆತನ್ಯಾಹು ಜತೆ ಸುದೀರ್ಘ ಸಭೆ 

ಇಸ್ರೇಲ್ ಯುದ್ಧಭೂಮಿಯಲ್ಲಿ ಕನ್ನಡದ ಏಕೈಕ ಚಾನೆಲ್ ಏಷ್ಯಾನೆಟ್‌ ಸುವರ್ಣ ನ್ಯೂಸ್ ವರದಿಯನ್ನು ನೀಡುತ್ತಿದೆ. ಇಸ್ರೇಲ್‌ನಲ್ಲಿರುವ ಕನ್ನಡಿಗರ ಜೊತೆ ಅಜಿತ್ ಹನಮಕ್ಕನವರ್ ಮಾತನಾಡಿದ್ದಾರೆ. ಇಸ್ರೇಲ್ ಸೈನಿಕರು ದಿನದ 24 ಗಂಟೆಯೂ ನಮ್ಮನ್ನು ರಕ್ಷಿಸುತ್ತಾರೆ. ಭಾರತೀಯರಿಗೆ(Indians) ಇಸ್ರೇಲ್‌ನಲ್ಲಿ (Isreal) ಅಪಾರ ಗೌರವವಿದೆ ಎಂದು ಇಸ್ರೇಲ್‌ನಲ್ಲಿರೋ ಜ್ಯೋತಿ, ಉಷಾ ಹೇಳಿಕೆ ನೀಡಿದ್ದಾರೆ. ಗಾಜಾಕ್ಕೆ(Gaza) ಅಮೆರಿಕದಿಂದ ಅನುಕಂಪದ ನೆರವು ನೀಡಲಾಗಿದೆ. 100 ಮಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದ್ದಾರೆ. ಗಾಜಾದಲ್ಲಿನ ಅಮಾಯಕರ ಬಗ್ಗೆ ಕಾಳಜಿಗೆ ಕರೆ. ಇಸ್ರೇಲ್ ಉತ್ತಮ ಮಾನವೀಯತೆ ಹೊಂದಿದೆ. ಹಮಾಸ್ ಅಮಾಯಕರನ್ನ ಬಳಸಿಕೊಳ್ಳುತ್ತಿದೆ. ವೆಸ್ಟ್ ಬ್ಯಾಂಕ್ ಹಾಗೂ ಗಾಜಾಗೆ 100 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ. ಅಮೆರಿಕ (America)ಹಾಗೂ ಈಜಿಪ್ಟ್‌ಟ್ ಒಟ್ಟಾಗಿ ಕಾರ್ಯ ನಡೆಸುತ್ತಿದೆ. ಗಡಿಭಾಗದಿಂದ ಬೇಗ ವರ್ಗಾವಣೆ ಮಾಡಲಾಗುವುದು ಎಂದು ಬೈಡೆನ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಇಸ್ರೇಲ್ ವಿರುದ್ಧ ಒಂದಾದ 57 ಮುಸ್ಲಿಂ ರಾಷ್ಟ್ರಗಳು: ಯುದ್ಧ ನಿಲ್ಲಿಸಲೂ ಒಐಸಿ ಒಕ್ಕೂಟದಿಂದ ಎಚ್ಚರಿಕೆ!

Video Top Stories