Asianet Suvarna News Asianet Suvarna News

ಇದು ಹೊಸ ಯುದ್ಧದ ಆರಂಭವಂತೆ.. ಅಂತ್ಯ ಹೇಗಿರಲಿದೆ? ಆ ರಕ್ತ ಚರಿತ್ರೆಯ ಪೂರ್ತಿ ಕತೆ!

ಅದು ಯುದ್ಧವಲ್ಲ.. ಅದಕ್ಕಿಂತಾ ಭೀಕರ.. ಒಂದು ದೇಶವನ್ನ ಇನ್ನೊಂದು ದೇಶ, ಕೂತಲ್ಲಿಂದಲೇ ಕಂಗೆಡಿಸೋಕೆ ಸಾಧ್ಯ ಅನ್ನೋದು, ಈಗ ಮತ್ತೊಮ್ಮೆ ಸಾಬೀತಾಗಿದೆ.. ಇಸ್ರೇಲಿನ ಉತ್ತರಕ್ಕಿರೋ ಲೆಬನಾನ್ನಲ್ಲಿ ನೆತ್ತರು ಕೋಡಿಯಾಗಿ ಹರಿದಿದೆ.. ಇದಕ್ಕೆಲ್ಲಾ ಕಾರಣ ಇಸ್ರೇಲ್ ಅಂತ ಹಲ್ಲುಮಸೆಯುತ್ತಿದೆ ಇರಾನ್.. ಅಷ್ಟೇ ಅಲ್ಲ, ಇಷ್ಟು ಕಾಲ ಇಸ್ರೇಲಿನ ಸರ್ವನಾಶಕ್ಕೆ ಕಾಯ್ತಾ ಇದ್ದ ಹೆಜ್ಬುಲ್ಲಾ ಉಗ್ರರು ಕೂಡ, ಮತ್ತೊಂದು ಶಪಥ ಕೈಗೆತ್ತಿಕೊಂಡಿದ್ದಾರೆ.. ಆ ರಕ್ತ ಚರಿತ್ರೆಯ ಪೂರ್ತಿ ಕತೆ ಇಲ್ಲಿದೆ ನೋಡಿ.

First Published Sep 20, 2024, 2:38 PM IST | Last Updated Sep 20, 2024, 2:38 PM IST

ಲೆಬನಾನ್ನಲ್ಲಿ ನಡೆದಿರೋ ದಾಳಿ, ಇಡೀ ಜಗತ್ತೇ ನಡುಗೋ ಹಾಗೆ ಮಾಡಿದೆ. ವಾಕಿಟಾಕಿ, ಪೇಜರುಗಳನ್ನೇ ಬ್ಲಾಸ್ಟ್ ಮಾಡಿದ ಮೇಲೆ, ಇನ್ನು ಮೊಬೈಲ್ ಬ್ಲಾಸ್ಟ್ ಮಾಡೋದು, ಒಂದು ಕಷ್ಟದ ಕೆಲಸಾನಾ, ನೀವೇ ಯೋಚಿಸಿ ನೋಡಿ. ಒಂದ್ ವೇಳೆ, ಉಗ್ರರಿಗೂ ಇಂಥಾ ಟೆಕ್ನಾಲಜಿ ಬಗ್ಗೆ ಗೊತ್ತಾದ್ರೆ ಏನೆಲ್ಲಾ ಅನಾಹುತ ಆಗ್ಬೋದು. ಕಲ್ಪನೆ ಮಾಡ್ಕೊಳ್ಳೋಕೂ ಭಯವಾಗುತ್ತೆ..ಅಷ್ಟಕ್ಕೂ ಈ ಪೇಜರ್ ಒಳಗೆ ಬಾಂಬ್ ಇಟ್ಟಿದ್ದು ಯಾರು? ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

Video Top Stories