Asianet Suvarna News Asianet Suvarna News

ವಿಭೀಷಣನಾಗಿ ಬಂದ ರಾನಿಲ್ ವಿಕ್ರಮಸಿಂಘೆ ಏನಾಗಲಿದೆ ಲಂಕಾ ಮುಂದಿನ ಭವಿಷ್ಯ..?

ದ್ವೀಪ ರಾಷ್ಟ್ರ ಶ್ರೀಲಂಕಾ ಪರಿಸ್ಥಿತಿ ಹೇಗಿದೆ ಎಂಬುವುದು ಸದ್ಯ ಇಡೀ ವಿಶ್ವಕ್ಕೇ ತಿಳಿದಿದೆ. ಆರ್ಥಿಕ ಹೊಡೆತಕ್ಕೆ ಸಿಲುಕಿದ ಲಂಕೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ನಾಯಕ ಮಹಿಂದಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಡಗಿಕೊಂಡಿದ್ದಾರೆ. ಇಲ್ಲಿನ ಜನರು ಹಣದುಬ್ಬರದಿಂದ ತತ್ತರಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಹೀಗಿರುವಾಗ ಇತ್ತ ಭಾರತದಲ್ಲಿ ಬೇರೆಯದ್ದೇ ಒಂದು ವಾದ ಮುಂದೆ ಬಂದಿದೆ. ಹೌದು ಅಂದಿನ ರಾಮಾಯಣ ಹಾಗೂ ಇಂದಿನ ಅಯೋಧ್ಯೆ ದೇಗುಲ ನಿರ್ಮಾಣಕ್ಕೆ ಸಂಬಂಧ ಕಲ್ಪಿಸಲಾಗುತ್ತಿದೆ. 

ಕೊಲಂಬೋ(ಮೇ.16): ಆರ್ಥಿಕ ಹೊಡೆತದಿಂದ ಶ್ರೀಲಂಕಾ ಕಂಗಾಲಾಗಿದೆ. ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿಂಸಾಚಾರದಿಂದ ಶ್ರೀಲಂಕಾ ಬೆಂಕಿ ಹೊತ್ತಿ ಉರಿಯುತ್ತಿದೆ. ಶ್ರೀಲಂಕಾದ ಸದ್ಯದ ಸ್ಥಿತಿ ಮತ್ತು ಭಾರತದಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಕಾಕತಾಳೀಯ ಎಂಬಂತೆ ರಾಮಾಯಣ, ರಾಮ-ರಾವಣರ ಯುದ್ಧ, ಲಂಕಾ ಧಹನವನ್ನು ನೆನಪಿಸುತ್ತಿರುವಂತಿದೆ. 

ಅಂದು ರಾವಣನಿಂದಾಗಿ ಹೊತ್ತಿ ಉರಿದಿದ್ದ ಲಂಕೆಯನ್ನು ಮತ್ತೆ ಹಸಿರು ಉಕ್ಕಿಸಲು ಬಂದಿದ್ದು ವಿಭೀಷಣ. ಈಗ ಆರ್ಥಿಕ ಸಂಕಷ್ಟದಿಂದ ಹೊತ್ತಿ ಉರಿದು, ಕಂಗಾಲಾಗಿರುವ ಲಂಕೆಯನ್ನು ಮತ್ತೆ ಅಭಿವೃದ್ಧಿ ಪಡಿಸಲು ವಿಭೀಷಣನ ಸ್ಥಾನದಲ್ಲಿ ರಾನಿಲ್ ವಿಕ್ರಮಸಿಂಘೆ ಬಂದಿದ್ದಾರೆ. ಹಾಗಿದ್ರೆ ಹೊಸ ಪ್ರಧಾನಿಯಾಗಿ ಬಂದಿರೋ ರಾನಿಲ್ ಎದುರು ಏನೆಲ್ಲ ಸಮಸ್ಯೆಗಳಿಗೆ ವೆ?

ಲಂಕಾದ ಹೊಸ ಪ್ರಧಾನಿಯಾಗಿ ಆಯ್ಕೆ ಆಗಿರುವ ರಾನಿಲ್ ವಿಕ್ರಮಸಿಂಘೆ ಅವ್ರ ಮುಂದಿನ ಹಾದಿ ಮುಳ್ಳಿನ ಹಾದಿಯಾಗಿದೆ. ಮುಳ್ಳಿನ ಹಾದಿಯಲ್ಲಿ ಹೇಗೆ ನಡೆಯುತ್ತಾರೆ ಅನ್ನೋದೇ ಈಗ ಎಲ್ಲರ ಮುಂದಿರೋ ಪ್ರಶ್ನೆ

Video Top Stories