ಚುನಾವಣೆಗೂ ಮುನ್ನ ಕುಕ್ಕೆಯಲ್ಲಿ ಪ್ರಾರ್ಥಿಸಿದ್ದ ಭಾರತೀಯ ಅಮೆರಿಕಾ ಸೆನೆಟ್‌ಗೆ ಮರು ಆಯ್ಕೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಭಕ್ತ ಡೆಮೊಕ್ರಟಿಕ್ ಪಕ್ಷದ ರಾಜಾ ಕೃಷ್ಣಮೂರ್ತಿ ಅವರು ಅಮೆರಿಕದ ಕೆಳಮನೆಗೆ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ.
ಬೆಂಗಳೂರು (ನ. 07): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಭಕ್ತ ಡೆಮೊಕ್ರಟಿಕ್ ಪಕ್ಷದ ರಾಜಾ ಕೃಷ್ಣಮೂರ್ತಿ ಅವರು ಅಮೆರಿಕದ ಕೆಳಮನೆಗೆ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. ಇವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆಲ ಸಮಯದ ಹಿಂದೆ ಆಗಮಿಸಿ 2020ರ ಚುನಾವಣೆಯಲ್ಲಿ ಗೆಲವು ದೊರಕಿಸಿಕೊಡುವಂತೆ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಇದೀಗ ಅವರು ಅಮೆರಿಕದ ಇಲಿಯಾನ್ಸ್‌ನ 8ನೇ ಜಿಲ್ಲೆಯಿಂದ ಮರು ಆಯ್ಕೆಯಾಗಿದ್ದಾರೆ.
ಅಮೆರಿಕಾದಲ್ಲಿ ಮತ ಎಣಿಕೆ, ದಂಪತಿಗೆ 15 ನೇ ಮಗು ಹೆಣ್ಣಾಯ್ತು, ಟ್ರಕ್ಕಲ್ಲಿ ಸಿವಿ ಇಟ್ಕೊಂಡವನಿಗೆ ಕೆಲಸ
ಚುನಾವಣೆ ಗೆಲ್ಲಲು ಬೆಂಗಳೂರು ಮೂಲದ ಶಿಕಾಗೋದ ಅರ್ಚಕ ನಾಗೇಂದ್ರ ರಾವ್ ಸಲಹೆಯಂತೆ ಕುಕ್ಕೆಯಲ್ಲಿ ನಾಗ ಪ್ರತಿಷ್ಠೆ, ಮಹಾಭಿಷೇಕ ಮಾಡಿಸಿದ್ದರು. ಇದೀಗ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲು ಕ್ಷೇತ್ರಕ್ಕೆ ಮನವಿ ಮಾಡಿದ್ದಾರೆ.