Asianet Suvarna News Asianet Suvarna News

ಅಷ್ಘಾನಿಸ್ತಾನದ ಅರ್ಧ ಜನತೆಗೆ ಕಾಡುತ್ತಿದೆ ಹಸಿವಿನ ಭೀತಿ..!

ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಅಷ್ಘಾನಿಸ್ತಾನ ಭೀಕರ ಬರ ಎದುರಿಸುತ್ತಿದ್ದು, ದೇಶದ 4 ಕೋಟಿ ಜನಸಂಖ್ಯೆಯಪೈಕಿ 2 ಕೋಟಿ 28 ಲಕ್ಷ ಜನ ಹಸಿವಿನ ಭೀತಿಗೆ ತುತ್ತಾಗಿದ್ದಾರೆ. 

ಕಾಬೂಲ್‌ (ನ. 03): ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಅಷ್ಘಾನಿಸ್ತಾನ ಭೀಕರ ಬರ ಎದುರಿಸುತ್ತಿದ್ದು, ದೇಶದ 4 ಕೋಟಿ ಜನಸಂಖ್ಯೆಯ ಪೈಕಿ 2 ಕೋಟಿ 28 ಲಕ್ಷ ಜನ ಹಸಿವಿನ ಭೀತಿಗೆ ತುತ್ತಾಗಿದ್ದಾರೆ. ಅದರಲ್ಲೂ ಕೃಷಿಯನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ಪ್ರದೇಶದ ಮೇಲೆ ಬರ ಭೀಕರ ಪರಿಣಾಮ ಬೀರಿದ್ದು, 73 ಲಕ್ಷ ಜನ ಮತ್ತು ಜಾನುವಾರುಗಳು ಅತಂತ್ರರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.

ಇಸ್ಲಾಂ ಮತಾಂತರಗೊಳ್ಳಿ, ಇಲ್ಲವೇ ದೇಶ ಬಿಡಿ: ಎಲ್ಲಾ ಸಮುದಾಯದವರಿಗೂ ತಾಲಿಬಾನ್ ವಾರ್ನಿಂಗ್!

ಈ ನಡುವೆ ನಿರುದ್ಯೋಗ, ಬಡತನದಿಂದ ತತ್ತರಿಸಿರುವ ಜನತೆಗೆ ಆಹಾರ ಪೂರೈಸಲು ತಾಲಿಬಾನ್‌ ಸರ್ಕಾರ, ಭಾರತದ ಉದ್ಯೋಗ ಖಾತ್ರಿ ಯೋಜನೆಯ ಕೂಲಿಗಾಗಿ ಕಾಳು ಎಂಬ ಯೋಜನೆ ಜಾರಿಗಳಿಸಿದೆ. ತಾಲಿಬಾನಿ ಆಡಳಿತ ಕಾರ್ಮಿಕರಿಗೆ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ. ಅಷ್ಘಾನಿಸ್ತಾನದಾದ್ಯಂತ ಈ ಯೋಜನೆ ಜಾರಿ ಮಾಡಿದ್ದು, ರಾಜಧಾನಿ ಕಾಬೂಲ್‌ ಒಂದರಲ್ಲೇ 40,000 ಜನಕ್ಕೆ ಕಾಲುವೆ ತೋಡುವ ಕಾಮಗಾರಿ ನೀಡಿ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ. 

Video Top Stories