ಇಸ್ಲಾಂಗೆ ಮತಾಂತರಗೊಳ್ಳಿ, ಇಲ್ಲವೇ ದೇಶ ಬಿಡಿ: ಎಲ್ಲಾ ಸಮುದಾಯದವರಿಗೂ ತಾಲಿಬಾನ್ ವಾರ್ನಿಂಗ್ !

ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ‘ಅಲ್ಪಸಂಖ್ಯಾತ ಸಿಖ್‌ ಸಮುದಾಯಕ್ಕೆ ಮತಾಂತರವಾಗಿ ಇಲ್ಲವೇ ದೇಶ ಬಿಟ್ಟು ತೊಲಗಿ’ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

Share this Video
  • FB
  • Linkdin
  • Whatsapp

ಕಾಬೂಲ್‌ (ನ. 03):  ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ‘ಅಲ್ಪಸಂಖ್ಯಾತ ಸಿಖ್‌ ಸಮುದಾಯಕ್ಕೆ ಮತಾಂತರವಾಗಿ ಇಲ್ಲವೇ ದೇಶ ಬಿಟ್ಟು ತೊಲಗಿ’ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ದೊಡ್ಡ ಸಂಖ್ಯೆಯ ಸಿಖ್‌ ಸಮುದಾಯ ಇಲ್ಲಿನ ಕಾಬೂಲ್‌, ಘಜ್ನಿ ಮತ್ತು ನಂಗಾಘರ್‌ನಲ್ಲಿ ನೆಲೆಸಿದೆ. ಈ ಸಮುದಾಯವನ್ನು ಗುರಿಯಾಗಿಸಿಕೊಂಡು ತಾಲಿಬಾನ್‌ ಉಗ್ರರು ಹಲವೆಡೆ ದಾಳಿ ನಡೆಸುತ್ತಿದ್ದು, ಇತ್ತೀಚೆಗೆ ಗುರುದ್ವಾರಕ್ಕೆ ನುಗ್ಗಿ ಅಲ್ಲಿದ್ದ ಕಾವಲುಗಾರರನ್ನು ಕಟ್ಟಿಹಾಕಿದ್ದರು. ಅಲ್ಲದೇ ಮತಾಂತರಗೊಳ್ಳಿ ಎಂಬ ಬೆದರಿಕೆ ಹಾಕಿದರು ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದ ಅರ್ಧ ಜನತೆಗೆ ಕಾಡುತ್ತಿದೆ ಹಸಿವಿನ ಭೀತಿ..!

ಹತ್ತು ಸಾವಿರದಷ್ಟಿದ್ದ ಸಿಖ್‌ ಜನಸಂಖ್ಯೆ ವಿರುದ್ಧ ನಡೆದ ವ್ಯವಸ್ಥಿತ ತಾರತಮ್ಯ, ಹಿಂಸೆ, ಸಾವು, ವಲಸೆ ಮತ್ತಿತರ ಕಾರಣಗಳಿಂದ ಸಮುದಾಯ ಅಧಃಪತನದ ಹಾದಿ ಹಿಡಿದಿದೆ ಎಂದು ಅಂತಾರಾಷ್ಟ್ರೀಯ ಹಕ್ಕುಗಳು ಮತ್ತು ಭದ್ರತಾ ವೇದಿಕೆ (ಐಎಫ್‌ಎಫ್‌ಆರ್‌ಎಎಸ್‌) ತಿಳಿಸಿದೆ.

Related Video