ಸಹಾಯ ಮಾಡಿ, ನಮ್ಮನ್ನು ಕಾಪಾಡಿ: ಅಮೆರಿಕ ಸೇನೆ ಎದುರು ಅಫ್ಘಾನ್ ಮಹಿಳೆಯರ ಕಣ್ಣೀರು!

ತಾಲಿಬಾನಿಗಳ ಕ್ರೌರ್ಯಕ್ಕೆ ಅಪ್ಘಾನಿಸ್ತಾನ ಅಕ್ಷರಶಃ ನಲುಗಿದೆ. ಕ್ಷಣ ಕ್ಷಣಕ್ಕೂ ಆತಂಕ ಎದುರಾಗುತ್ತಿದೆ. ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇನ್ನು ಅತ್ತ ತಾಲಿಬಾನ್ ಯಾರಿಗೂ ಏನೂ ಆಗಲ್ಲ ಎಂಬ ಅಭಯ ಕೊಟ್ಟು, ಹಿಂಸಾಚಾರದಲ್ಲಿ ತೊಡಗಿದೆ. ಈ ಮೂಲಕ ತನ್ನ ಮಾತನ್ನು ತಾನೇ ಮುರಿದಿದೆ. 

First Published Aug 19, 2021, 11:46 AM IST | Last Updated Aug 19, 2021, 12:19 PM IST

ಕಾಬೂಲ್(ಆ.19) ತಾಲಿಬಾನಿಗಳ ಕ್ರೌರ್ಯಕ್ಕೆ ಅಪ್ಘಾನಿಸ್ತಾನ ಅಕ್ಷರಶಃ ನಲುಗಿದೆ. ಕ್ಷಣ ಕ್ಷಣಕ್ಕೂ ಆತಂಕ ಎದುರಾಗುತ್ತಿದೆ. ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇನ್ನು ಅತ್ತ ತಾಲಿಬಾನ್ ಯಾರಿಗೂ ಏನೂ ಆಗಲ್ಲ ಎಂಬ ಅಭಯ ಕೊಟ್ಟು, ಹಿಂಸಾಚಾರದಲ್ಲಿ ತೊಡಗಿದೆ. ಈ ಮೂಲಕ ತನ್ನ ಮಾತನ್ನು ತಾನೇ ಮುರಿದಿದೆ. 

ಭಯ ಭೀತರಾಗಿರುವ ಮಹಿಳೆಯರು ಹಾಗೂ ಮಕ್ಕಳು ಅಮೆರಿಕ ಸೇ ಬಳಿ ಸಹಾಯ ಮಾಡುವಂತೆ ಮನವಿ ಮಾಡಿದ್ದು, ದಯವಿಟ್ಟು ಕಾಬೂಲ್‌ ಏರ್‌ಪೋರ್ಟ್‌ ಒಳಗೆ ನಮ್ಮನ್ನು ಬಿಡಿ ಎಂದು ಗೋಗರೆಯುತ್ತಿದ್ದಾರೆ,.