ಹಮಾಸ್ ಬಗ್ಗುತ್ತಿಲ್ಲ.. ಇಸ್ರೇಲ್ ಬಿಡುತ್ತಿಲ್ಲ: ಮಧ್ಯಪ್ರಾಚ್ಯದ ಮುಗಿಯದ ಯುದ್ಧದ ಕಂಪ್ಲೀಟ್ ಸ್ಟೋರಿ!

ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದಿದೆ. ಇಸ್ರೇಲ್‌ನ ಪ್ರತಿದಾಳಿಗೆ ಗಾಜಾದಲ್ಲಿ ಸಾವು ನೋವು ಸಂಭವಿಸಿದೆ. ಹಮಾಸ್ ಬಗ್ಗುತ್ತಿಲ್ಲ.. ಇಸ್ರೇಲ್ ಬಿಡುತ್ತಿಲ್ಲ..! ಮಧ್ಯಪ್ರಾಚ್ಯದ ಮುಗಿಯದ ಯುದ್ಧದ ಕಂಪ್ಲೀಟ್ ಸ್ಟೋರಿ!

Anusha Kb  | Updated: Mar 26, 2025, 8:27 AM IST

  • ಇಸ್ರೇಲ್ ಆಯುಧಕ್ಕೆ 50000 ಬಲಿ
  • ಉಗ್ರರ ದಾಳಿಗೆ ಇಸ್ರೇಲಿನ ಉತ್ಯುಗ್ರ ಪ್ರತಿದಾಳಿ
  • ಕದನ ವಿರಾಮ ಮುಗಿದ ಬೆನ್ನಲ್ಲೇ ಹರಿಯುತ್ತಿದೆ ರಕ್ತದ ಕೋಡಿ
  • ಸೇಫ್ ಝೋನುಗಳೂ ಸೇಫಲ್ಲ.. ಉಗ್ರರಿಗೆ ಉಳಿಗಾಲವಿಲ್ಲ
  • ಕದನ ವಿರಾಮದ ಬಳಿಕ ಘೋರವಾಯ್ತು ಇಸ್ರೇಲ್-ಹಮಾಸ್ ಯುದ್ಧ
  • ಭೀಕರ ಬದಲಾವಣೆಗೆ ಕಾರಣವೇನು ಗೊತ್ತಾ
  • ಅರ್ಧ ಲಕ್ಷದ ಗಡಿದಾಟಿದೆ ಗಾಜಾದಲ್ಲಿ ಸತ್ತವರ ಸಂಖ್ಯೆ
  • 1 ಸಾವಿಗೆ 42 ಬಲಿ ಇಸ್ರೇಲ್ ಪ್ರತೀಕಾರದ ಪ್ರತಿಜ್ಞೆ

ಅವತ್ತು ಉಗ್ರರು ನಡೆಸಿದ್ದ ಆ ದಾಳಿಗೆ, ಇಂದು ಅತ್ಯುಗ್ರ ಪ್ರತಿದಾಳಿಯ ಉತ್ತರ ಕೊಡ್ತಾ ಇದೆ ಇಸ್ರೇಲ್.. ಅದನ್ನ ಅರಗಿಸಿಕೊಳ್ಳೋಕೆ, ಗಾಜಾ ಪಟ್ಟಿಗೆ ಸಾಧ್ಯವೇ ಇಲ್ಲ.. ಯಾಕಂದ್ರೆ, ಇಸ್ರೇಲ್ ಹಮಾಸ್ ಉಗ್ರರು ಊಹಿಸಿದಷ್ಟು ವೀಕ್ ಆಗಿರ್ಲಿಲ್ಲ.. ಅದರ ಪರಿಣಾಮವೇ, ಹಮಾಸ್ ಸಾಮ್ರಾಜ್ಯದಲ್ಲಿ ನೆತ್ತರಿನ ಹೊಳೆ ಹರೀತಿರೋದು.. ಅವರು ತೆಗೆದ ಒಂದು ಪ್ರಾಣಕ್ಕೆ 42 ಬಲಿಯಾಗ್ತಾ ಇರೋದು.. ಹಾಗಾದ್ರೆ ಈ ಒನ್ ಇಂಟೂ ಫಾರ್ಟಿ ಟೂ, ಲೆಕ್ಕಾಚಾರವೇನು? ಅದರ ಹಿಂದಿರೋ ಗುಟ್ಟೇನು? ನೀವೇ ನೋಡಿ..

ಈ ಪ್ರಶ್ನೆಗೆ ನೀವು ಊಹಿಸೋದಕ್ಕೂ ಸಾಧ್ಯವಾಗಧಂಥಾ ಉತ್ತರ ಇದೆ.. ತನ್ನ ಒಬ್ಬ ಇಸ್ರೇಲಿಯ ಜೀವಕ್ಕೆ, 42 ಉಗ್ರರ ಪ್ರಾಣ ಬಲಿ ಪಡೀತಿರೋ ಇಸ್ರೇಲ್, ಯಾವಾಗ ತನ್ನ ರಣದಾಹ ನೀಗಿಸಿಕೊಳ್ಳಲಿದೆ? ಯಾವಾಗ ಈ ಘೋರ ಕದನ ನಿಲ್ಲಲಿದೆ? ಗಾಜಾ ಪಟ್ಟಿನಾ ಸರ್ವನಾಶ ಮಾಡಿಯೇ ಸಿದ್ಧ ಅಂತ, ಯುದ್ಧಕ್ಕೆ ಹೊರಟು ನಿಂತುಬಿಟ್ಟಿದೆ ಇಸ್ರೇಲ್.. ಆದ್ರೆ ಈ ದಾಳಿಯ ಪೆಟ್ಟನ್ನೆಲ್ಲಾ ಹಮಾಸ್ ಸುಮ್ಮನೆ ಸಹಿಸಿಕೊಳ್ಳುತ್ತಾ, ಬುದ್ಧಿ ಕಲಿತು ಸುಮ್ಮನಾಗುತ್ತಾ, ಅಥವಾ, ಈ ಯುದ್ಧವನ್ನ ಮತ್ತೊಂದು ಹಂತಕ್ಕೆ ಕರೆದುಯ್ಯುತ್ತಾ?

ಇಸ್ರೇಲ್ ಅದೆಷ್ಟು ತೀವ್ರವಾಗಿ ತನ್ನ ದಾಳಿ ನಡೆಸ್ತಾ ಇದೆ ಅಂದ್ರೆ, ಆದಷ್ಟು ಬೇಗ, ಹಮಾಸ್ ಎಂಬ ಉಗ್ರ ಸಂಘಟನೆಯ ಒಬ್ಬೇ ಒಬ್ಬನೂ ಕೂಡ, ಉಳಿಬಾರ್ದು ಅಂತ ಟಾರ್ಗೆಟ್ ಇಟ್ಕೊಂಡಿರೋದು ಸ್ಪಷ್ಟವಾಗಿ ಕಾಣ್ತಾ ಇದೆ.. ಆದ್ರೆ, ಅದು ಸಾಧ್ಯವಾಗೋಕೆ ಇನ್ನೆಷ್ಟು ಕಾಲ ಬೇಕು? ಅಲ್ಲೀ ತನಕ ಹಮಾಸ್ ಸೈಲೆಂಟ್ ಆಗಿರತ್ತಾ? ಅದರ ಮಧ್ಯೆ, ಈ ಮಧ್ಯಪ್ರಾಚ್ಯದ ಕತೆ ಏನು? ನೋಡೋಣ.ಇನ್ನೇನು ಮುಗಿದೇ ಹೋಯ್ತು ಅಂದ್ಕೊಂಡಿದ್ದ, ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಗ್ರಾಮ, ಈಗ ಮತ್ತೆ ಭುಗಿಲೆದ್ದಿದೆ.. ಅವತ್ತು ಹಮಾಸ್ ಉಗ್ರರು ಮಾಡಿದ್ದಕ್ಕೆ ಪ್ರತೀಕಾರ ಅನ್ನೋ ಹಾಗೆ, ಇಸ್ರೇಲ್ ದಂಡಯಾತ್ರೆ ಮುಂದುವರೆಸಿದೆ.. ಈ ಆರಂಭವೇ ಇಷ್ಟು ಭೀಕರವಾಗಿದ್ರೆ, ಇನ್ನು ಕ್ಲೈಮ್ಯಾಕ್ಸ್ ಏನಾಗಬಹುದು? ಇದೆಲ್ಲದರ ಡಿಟೇಲ್ ವೀಡಿಯೋದಲ್ಲಿದೆ ನೋಡಿ..

Read More...