ಕೊರೋನಾದಿಂದ ಕಂಗೆಟ್ಟವರಿಗೆ ಕೊನೆಗೂ ಗುಡ್‌ ನ್ಯೂಸ್, ಬಂತು ಲಸಿಕೆ!

ಕೊರೋನಾ ಕಾಟದಿಂದ ಕಂಗೆಟ್ಟವರು ಕೊನೆಗೂ ನಿಟ್ಟುಸಿರು ಬಿಡುವ ಸಮಯ ಬಂದಿದೆ. ಕೊರೋನಾ ಲಸಿಕೆ ಸಂಶೋಧಿಸುವ ಜಿದ್ದಿನಲ್ಲಿ ರಷ್ಯಾ ಬಹುತೇಕ ಯಶಸ್ಸು ಸಾಧಿಸಿದೆ.

First Published Aug 11, 2020, 2:37 PM IST | Last Updated Aug 11, 2020, 2:37 PM IST

ಮಾಸ್ಕೋ(ಆ.11): ಕೊರೋನಾ ಕಾಟದಿಂದ ಕಂಗೆಟ್ಟವರು ಕೊನೆಗೂ ನಿಟ್ಟುಸಿರು ಬಿಡುವ ಸಮಯ ಬಂದಿದೆ. ಕೊರೋನಾ ಲಸಿಕೆ ಸಂಶೋಧಿಸುವ ಜಿದ್ದಿನಲ್ಲಿ ರಷ್ಯಾ ಬಹುತೇಕ ಯಶಸ್ಸು ಸಾಧಿಸಿದೆ.

ಹೌದು ರಷ್ಯಾ ಕೊರೋನಾ ನಿಯಂತ್ರಣ ಲಸಿಕೆ ಆವಿಷ್ಕಾರದಲ್ಲಿ ಯಶಸ್ಸು ಗಳಿಸಿದ್ದು ಇಂಜೆಕ್ಷನ್ ರೆಡಿಯಾಗಿದೆ. ಇದಕ್ಕಾಗಿ ನಾಳೆ, ಬುಧವಾರದಿಂದಲೇ ಲಸಿಕೆಯ ಅಧಿಕೃತ ನೋಂದಣಿ ಆರಂಭವಾಗಲಿದೆ. 

ಈ ನೋಂದಣಿ ಪಾಸಾದ್ರೆ ಈ ಲಸಿಕೆ ಮಾರುಉಕಟ್ಟೆಗೂ ಎಂಟ್ರಿ ಕೊಡಲಿದೆ. ಈ ಮೂಲಕ ಲಸಿಕೆ ಜನ ಬಳಕೆಗೆ ಆರಂಭಿಸಿದ ಮೊದಲ ರಾಷ್ಟ್ರವೆಂದು ರಷ್ಯಾ ಗುರುತಿಸಿಕೊಳ್ಳಲಿದೆ.